ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಆರಂಭ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದೆ. ಮಾ.25 ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವುದರೊಂದಿಗೆ ಆರಂಭಗೊಂಡ ಜಾತ್ರೋತ್ಸವ ಏ.10ರ ವರೆಗೆ ನಡೆಯಲಿದೆ. ಇಂದು ಮಧ್ಯಾಹ್ನ ಮಹಾಸಮಾರಾಧನೆ, ರಾತ್ರಿ ದೇವರ ಶ್ರೀ ಭೂತಬಲಿ,ದೇವರ ನೃತ್ಯ ಬಲಿ ನಂತರ ಕಟ್ಟೆಪೂಜೆ ನಡೆಯಲಿದೆ‌.
ಜಾತ್ರೋತ್ಸವಕ್ಕಾಗಿ ದೇವಳವನ್ನು ವಿದ್ಯುತ್ ದೀಪಗಳಿಂದ ಹಾಗೂ ಹೂವುಗಳಿಂದ ಅಲಂಕರಿಸಲಾಗಿದೆ‌.