ಮಂಗಳೂರಿನ ಅಭಿನವ ಎಂಟರ್ಪ್ರೈಸಸ್ ಪಾಲುದಾರರಿಗೆ ಸರ್ವಿಸ್ ರೆಕೋಗ್ನಿಷನ್ ಪುರಸ್ಕಾರ

0

ಮಂಗಳೂರಿನ ಅಭಿನವ ಎಂಟರ್ಪ್ರೈಸಸ್‌ನ ಪಾಲುದಾರರಾದ ಸತೀಶ್ ಡಿ.ವಿ. ದೋಳ ಹಾಗೂ ಶ್ರೀಮತಿ ಶಾಂತಿ ಸತೀಶ್ ದೋಳರವರಿಗೆ ಫೆಬ್ರವರಿ ೨೩ರಂದು ತಮಿಳುನಾಡಿನ ಮಮಲ್ಲಪುರಂನ ಐಟಿಸಿ ವೆಲ್‌ಕಮ್ ಹೋಟೆಲ್‌ನಲ್ಲಿ ನಡೆದ ವ್ಯಾಪಾರ ಪಾಲುದಾರರ ಸಭೆಯಲ್ಲಿ ಸರ್ವಿಸ್ ರೆಕೋಗ್ನಿಷನ್ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಸೋನಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನೇರ ಗ್ರಾಹಕ ಕೇಂದ್ರಿತ ವಿಭಾಗವು ಇವರ ಸಂಸ್ಥೆಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿದೆ.
ಸೋನಿ ಅಥೋರೈಸ್ಡ್ ಸರ್ವಿಸ್ ಸೆಂಟರ್ ಆಗಿರುವ ಮಂಗಳೂರಿನ ಅಭಿನವ ಎಂಟರ್ಪ್ರೈಸಸ್ ಸುಮಾರು ೧೫ ವರ್ಷಗಳಿಂದ ಸೋನಿ ಕಂಪೆನಿಯೊಂದಿಗೆ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ನೇರ ಗ್ರಾಹಕ ಕೇಂದ್ರಿತ ಸೋನಿ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ವಿಶಾಲ್ ಮಾಥುರ್, ಆಲ್ ಇಂಡಿಯಾ ಸೋನಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಆಪರೇಷನ್ ಮುಖ್ಯಸ್ಥರಾದ ಸುರೆಂದರ್ ಸಮರಿಯ, ರಿಜನಲ್ ಮ್ಯಾನೇಜರ್ ಶ್ರೀನಿವಾಸನ್, ಬ್ರಾಂಚ್ ಮ್ಯಾನೇಜರ್ ಚಂದ್ರಶೇಖರ್ ಉಪಸ್ಥಿತರಿದ್ದರು.
ಸತೀಶ್ ಡಿ.ವಿ. ದೋಳ ಅವರು ಗೂನಡ್ಕ ಗ್ರಾಮದ ದೋಳ ವೀರಪ್ಪ ಗೌಡರ ಪುತ್ರರಾಗಿದ್ದು, ಪ್ರಸ್ತುತ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.