ಬೆಳ್ಳಾರೆ :ಶ್ರೀ ರಾಮ ನವಮಿ ಪ್ರಯುಕ್ತ ಶ್ರೀ ರಾಮ ತಾರಕ ಯಜ್ಞ

0

ಶ್ರೀ ರಾಮ ಸೇವಾ ಸಮಿತಿ ಇದರ ಇದರ ವತಿಯಿಂದ ಶ್ರೀ ರಾಮ ನವಮಿ ಪ್ರಯುಕ್ತ ಶ್ರೀ ರಾಮ ತಾರಕ ಯಜ್ಞ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಮಾರ್ಚ್ 26ರಂದು ನಡೆಯಿತು. ವೇ. ಮೂ. ಶ್ರೀ ಶಂಭು ಭಟ್ ಚಾವಡಿಬಾಗಿಲು ನೆಟ್ಟಾರು ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನವು ನಡೆಯಿತು.

ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬೆಳ್ಳಾರೆ ಮತ್ತು ವೆಂಕಟೇಶ್ ಪೈ ಬಾಚೋಡಿ ಇವರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಮಧ್ಯಾಹ್ನ ಪೂರ್ಣಾಹುತಿ ನಂತರ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ರಾಮ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಪಾಲ್ಗೊಂಡರು.