














ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಸರಳ ವಿಧಾನಗಳ ಮೂಲಕ ಇಂಗ್ಲೀಷ್ ನಲ್ಲಿ ಬೋಧಿಸಲು ಮತ್ತು ಇಂಗ್ಲೀಷ್ ಮಾತನಾಡಲು ಕಲಿಸಿಕೊಡುವ ರಜಾ ದಿನಗಳ ಒಂದು ತಿಂಗಳ ವಿಶೇಷ ಇಂಗ್ಲೀಷ್ ಸಂಭಾಷಣಾ ತರಬೇತಿಯನ್ನು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
ವಿಶೇಷವಾಗಿ ಶಿಕ್ಷಕರಿಗೆ ಮತ್ತು ಯಾವುದೇ ಪದವಿಯಾದವರಿಗೆ ಈ ತರಬೇತಿ ಆಯೋಜಿಸಲಾಗಿದ್ದು, ಎ. 15 ರಿಂದ ಮೇ. 15 ರವರೆಗೆ ದೈನಂದಿನ ತರಬೇತಿ ನಡೆಯಲಿದೆ. ವಿಶೇಷ ವೈಯಕ್ತಿಕ ಗಮನದೊಂದಿಗೆ ಪ್ರತಿದಿನವೂ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಇಂಗ್ಲೀಷ್ ನಲ್ಲೇ ಮಾತನಾಡಲು ಈ ತರಬೇತಿ ನೀಡಲಾಗುತ್ತದೆ.
ಶಾಲಾ ಕಾಲೇಜುಗಳಲ್ಲಿ ಹಾಗೂ ಉದ್ಯೋಗದ ಸ್ಥಳಗಳಲ್ಲಿ ಇಂಗ್ಲೀಷ್ ಭಾಷಾ ಸಂವಹನವು ಅಗತ್ಯವಾಗಿದ್ದು, ವಿಶೇಷವಾಗಿ ಶಿಕ್ಷಕರಿಗೆ ಇಂಗ್ಲೀಷ್ ಸಂವಹನದ ಅಗತ್ಯವನ್ನು ಮನಗಂಡು ಈ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. 30 ದಿನಗಳ ನಿರಂತರ ತರಬೇತಿಯ ದಿನಗಳಲ್ಲಿ ಇಂಗ್ಲೀಷ್ ಮಾತಾನಾಡುವ ಜೊತೆಗೆ ಇಂಗ್ಲೀಷ್ ಫೋನೆಟಿಕ್ಸ್ ಮತ್ತು ಫೋನಿಕ್ಸ್ ತರಬೇತಿಯನ್ನು ಅನುಭವಿ ಶಿಕ್ಷಕರಿಂದ ನಡೆಸಲಾಗುತ್ತದೆ. ಈ ತರಬೇತಿಯ ಪ್ರಥಮ ಬ್ಯಾಚ್ ಗೆ ಸೀಮಿತ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಆಸಕ್ತರು ಏಪ್ರಿಲ್ 5ರ ಮೊದಲು ಹೆಸರು ನೋಂದಾಯಿಸುವುದು. ಹೆಚ್ಚಿನ ಮಾಹಿತಿಗಾಗಿ ಜ್ಞಾನದೀಪ ಶಿಕ್ಷಣ ತರಬೇತಿ ಕೇಂದ್ರ, ಕಲ್ಪವೃಕ್ಷ ಆರ್ಕೆಡ್, ಬೆಳ್ಳಾರೆ ದೂರವಾಣಿ 8951007662 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ವರದಿ : ಉಮೇಶ್ ಮಣಿಕ್ಕಾರ






