ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಲಲಿತ ನಾಟಿಕೇರಿಯವರಿಗೆ ಶೌಚಾಲಯ ಮತ್ತು ಸ್ನಾನಗೃಹದ ನಿರ್ಮಾಣ – ಹಸ್ತಾಂತರ

0

ಶ್ರೀ ಕ್ಷೇತ್ರ ಧ‌.ಗ್ರಾ.ಯೋಜನೆ ಗ್ರಾಮ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾಲ್ಸಲ್ಯ ಕಾರ್ಯಕ್ರಮ ಯೋಜನೆಯಡಿಯಲ್ಲಿ ನಾಟಿಕೇರಿ ಲಲಿತ ಎಂಬವರಿಗೆ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಾಣ ಮಾಡಿದ್ದು ಅದರ ಹಸ್ತಾಂತರ ಕಾರ್ಯಕ್ರಮವು ಮಾ.29 ರಂದು ನಡೆಯಿತು.


ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ‌ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್ .ಮನ್ಮಥರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡರವರು ಗ್ರಾಮಾಭಿವೃದ್ದಿ ಯೋಜನೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ನೂತನವಾಗಿ ನಿರ್ಮಾಣವಾಗಿರುವಂತಹ ಶೌಚಾಲಯ ಮತ್ತು ಸ್ನಾನಗೃಹವನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.


ಬೆಳ್ಳಾರೆ ವಿಪತ್ತು ತಂಡದ ವತಿಯಿಂದ ಸದಸ್ಯರು ಶೌಚಾಲಯದ ಗುಂಡಿಯನ್ನು ನಿರ್ಮಾಣಮಾಡುವಲ್ಲಿ ಸಹಕರಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧ.ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಮೇಲ್ವಿಚಾರಕ ಶೇಖರ್, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ವೆಂಕಪ್ಪ ಗೌಡ ಜೆ.ಟಿ, ರವಿನಾಥ ಮಡ್ತಿಲ, ಸೇವಾ ಪ್ರತಿನಿಧಿ ಮೀನಾಕ್ಷಿ,ಒಕ್ಕೂಟ ಹಾಗೂ ವಲಯಾಧ್ಯಕ್ಷೆ ಶ್ರೀಮತಿ ವೇದಾ ಶೆಟ್ಟಿ, ಮಾಜಿ ವಲಯಾಧ್ಯಕ್ಷರು ಶೌರ್ಯ ವಿಪತ್ತು ಘಟಕದ ಸದಸ್ಯ ವೀರನಾಥ ಬೆಳ್ಳಾರೆ,ಶೇಖರ ಮಡ್ತಿಲ,ಒಕ್ಕೂಟದ ಪದಾಧಿಕಾರಿ ವಿಮಲ,ಸದಸ್ಯರಾದ ನಯನ,ಶ್ಯಾಮಲ ಹಾಗೂ ಮನೆಯವರು ಉಪಸ್ಥಿತರಿದ್ದರು. ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ಲಕ್ಷ್ಮೀ ಸ್ವಾಗತಿಸಿ,ವಂದಿಸಿದರು.