ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷ -ಶ್ರೀನಾಥ್ ಆಲೆಟ್ಟಿ, ಕಾರ್ಯದರ್ಶಿ – ದಿನೇಶ್ ಆಲೆಟ್ಟಿ, ಖಜಾಂಜಿ- ಹರಿಪ್ರಸಾದ್ ಗಬ್ಬಲ್ಕಜೆ















ಆಲೆಟ್ಟಿ ಶ್ರೀ ಸದಾಶಿವ ಭಜನಾ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಮಾ. 29 ರಂದು ಸದಾಶಿವ ಸಭಾಭವನದಲ್ಲಿ ನಡೆಯಿತು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷರಾದ ಅಚ್ಚುತ ಮಣಿಯಾಣಿ ಆಲೆಟ್ಟಿ,ವ್ಯವಸ್ಥಾಪನಾ ಸಮಿತಿ ಸದಸ್ಯ ವಿಜಯಕುಮಾರ್ ಆಲೆಟ್ಟಿ, ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಸಂಘದ ಕಾರ್ಯದರ್ಶಿ ಪ್ರವೀಣ್ ಆಲೆಟ್ಟಿ, ಕೋಶಾಧಿಕಾರಿ ಸುಂದರ ಆಲೆಟ್ಟಿ ಉಪಸ್ಥಿತರಿದ್ದರು.
ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ವಾಚಿಸಿದರು.ಕೋಶಾಧಿಕಾರಿ ಲೆಕ್ಕ ಪತ್ರ ಮಂಡಿಸಿದರು.
ಬಳಿಕ ಮುಂದಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಗೌರವಾಧ್ಯಕ್ಷರಾಗಿ ಶಿವಪ್ರಸಾದ್ ಆಲೆಟ್ಟಿ, ಅಧ್ಯಕ್ಷರಾಗಿ ಶ್ರೀನಾಥ್ ಆಲೆಟ್ಟಿ, ಕಾರ್ಯದರ್ಶಿ ದಿನೇಶ್ ಆಲೆಟ್ಟಿ, ಕೋಶಾಧಿಕಾರಿ ಹರಿಪ್ರಸಾದ್ ಗಬ್ಬಲ್ಕಜೆ, ಉಪಾಧ್ಯಕ್ಷರುಗಳಾಗಿ ಲಕ್ಷ್ಮಣ ಗೌಡ ಪರಿವಾರ,ಸುಧಾಕರ ಆಲೆಟ್ಟಿ,ಜತೆ ಕಾರ್ಯದರ್ಶಿ ಅಶ್ವಥ್ ಆಲೆಟ್ಟಿ,ಸಂಘಟನಾ ಕಾರ್ಯದರ್ಶಿ ಯೋಗಿಶರಾಮ ಗುಂಡ್ಯ, ನಿರ್ದೇಶಕರಾಗಿ ರತ್ನಾಕರ ಗೌಡ ಕುಡೆಕಲ್ಲು, ಚಂದ್ರಶೇಖರ ಆಲೆಟ್ಟಿ, ರಾಮ ಮಣಿಯಾಣಿ ಆಲೆಟ್ಟಿ, ಲೋಕಯ್ಯ ಗೌಡ ಅಲೆಟ್ಟಿ, ಜಯರಾಮ ಕುದ್ಕುಳಿ, ದಿನಕರ ಕೂರ್ನಡ್ಕ, ಉದಯ ಕುಡೆಕಲ್ಲು, ಪೂವಯ್ಯ ಗೌಡ ಗುಂಡ್ಯ, ಬೋಜರಾಯ ಆಚಾರ್ಯ ಆಲೆಟ್ಟಿ, ಬಾಬು ರೈ ಆಲೆಟ್ಟಿ, ಚಿದಾನಂದ ನೂಜಿನ ಮೂಲೆ, ಬೊಳ್ಳುಕುಂಞ ಗುಂಡ್ಯ, ದೀಪಕ್ ಶಗ್ರಿತ್ತಾಯ, ವೇದಾವತಿ ಸಣ್ಣಯ್ಯ ಗೌಡ, ರಾಮಚಂದ್ರ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ, ಮಹಾಬಲ ರೈ ಆಲೆಟ್ಟಿ, ವಿಜಯ್ ಕುಮಾರ್ ಆಲೆಟ್ಟಿ, ವನಜಾಕ್ಷಿ ಆಲೆಟ್ಟಿ, ಯಶೋದ ಗುಂಡ್ಯ,ವಸಂತ ಆಲೆಟ್ಟಿ, ಗೌರಿಶಂಕರ ಆಲೆಟ್ಟಿ, ತೇಜಕುಮಾರ್ ಕುಡೆಕಲ್ಲು, ಮಾಧವ ನಾಯ್ಕ್ ಎಲಿಕ್ಕಳ ಹಾಗೂ ಕಾರ್ಯಕಾರಿ ಸಮಿತಿಯ ಸಂಚಾಲಕರಾಗಿ ಧನಂಜಯ ಆಲೆಟ್ಟಿ,ಸಹಸಂಚಾಲಕರಾಗಿ ಪ್ರವೀಣ್ ಆಲೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಸಮಿತಿಗೆ ನೂತನ ಸದಸ್ಯರನ್ನು ಸೇರ್ಪಡೆ ಮಾಡಲಾಯಿತು. ಧನಂಜಯ ಆಲೆಟ್ಟಿ ಪ್ರಾರ್ಥಿಸಿದರು. ಪ್ರವೀಣ್ ಆಲೆಟ್ಟಿ ಸ್ವಾಗತಿಸಿ, ದಿನೇಶ್ ಆಲೆಟ್ಟಿ ವಂದಿಸಿದರು.







