













ಕರ್ನಾಟಕ ಅಂಡರ್-17 ಫುಟ್‌ಬಾಲ್ ತಂಡಕ್ಕೆ ಸುಳ್ಯ ಮೂಲದ ಜೈವೀರ್ ಎಂ ಪೈ ಆಯ್ಕೆಯಾಗಿದ್ದಾರೆ.
ಅವರು ಮೇ 7, 2026 ರಿಂದ ಕೇರಳದಲ್ಲಿ ನಡೆಯಲಿರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಜೈ ವೀರ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಮತ್ತು ಚಿತ್ರ ನಟರಾಗಿರುವ ಸುಳ್ಯದ ಮಂಜುನಾಥ ಪೈ ಮತ್ತು ದಿವ್ಯ ಪೈ ದಂಪತಿಯ ಪುತ್ರ. ಗೊರವನಗುಂಡಿ ರಾಧಾಕೃಷ್ಣ ಪೈ ಅವರ ಮೊಮ್ಮಗ. ಪ್ರಸ್ತುತ ಜೈವೀರ್ ಅವರು ಎಂಟನೇ ತರಗತಿಯಲ್ಲಿ ಓದುತ್ತಿದ್ದಾರೆ.







