ದ.ಕ.ಗೌಡ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ವತಿಯಿಂದ ಮಹಿಳಾ ದಿನಾಚರಣೆ

0

ಗ್ರಂಥಪಾಲಕಿ ಡಾ.ಮೀರಾಮಣಿ ನೂಜಿಯವರಿಗೆ ಸನ್ಮಾನ

ಬೆಂಗಳೂರಿನ ದ.ಕ.ಗೌಡ ಕ್ಷೇಮಾಭಿವೃದ್ದಿ ಸಮಿತಿಯಿಂದ ವಿಶ್ವಮಹಿಳಾ ದಿನಾಚರಣೆಯನ್ನು ಬೆಂಗಳೂರಿ‌ನ ಬನಶಂಕರಿಯಲ್ಲಿರುವ ಆರ್.ಅಶೋಕ ಪಾಲಿಟಿಕಲ್ ಪಾರ್ಟಿ ಕಚೇರಿಯ ಸಭಾಂಗಣದಲ್ಲಿ ಮಾ. 29 ರಂದು ನಡೆಯಿತು.
ಸಂಘದ ಅಧ್ಯಕ್ಷ ಓಂಪ್ರಕಾಶ್ ಪಿಂಡಿಮನೆ ಅಧ್ಯಕ್ಷತೆ ವಹಿಸಿದ್ದರು.


ಸಂಘದ ಉಪಾಧ್ಯಕ್ಷ ನಾರಾಯಣ ಗೌಡ,ಕಾರ್ಯದರ್ಶಿ ಸಂದೀಪ್ ದೇವರಗುಂಡ ಜಂಟಿ ಕಾರ್ಯದರ್ಶಿ ವಿಶ್ವಾಸ್ ಮಡ್ತಿಲ,ಖಜಾಂಜಿ ಬಾಲಕೃಷ್ಣ ಪರ್ಲ ಮಹಿಳಾ ಘಟಕದ ಅಧ್ಯಕ್ಷೆ ಶಶಿಪ್ರಭಾ ಮಡ್ತಿಲ, ಕಾರ್ಯದರ್ಶಿ ಡಾ.ಶರ್ಮಿಳಾ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭ ಬೆಂಗಳೂರಿನ ಜೈನ್ ಯುನಿವರ್ಸಿಟಿಯ ಗ್ರಂಥಪಾಲಕಿ ಡಾ.ಮೀರಾಮಣಿ ನೂಜಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಮಿತಾ ಮುಂಡೋಡಿ ಸನ್ಮಾನಿತರ ಪರಿಚಯ ವಾಚಿಸಿದರು. ಕು. ತನ್ವಿ ಪ್ರಾರ್ಥಿಸಿದರು. ಉಪಾಧ್ಯಕ್ಷೆ ಡಾ.ಅನಿತ ಕನ್ನಡ್ಕ ಸ್ಬಾಗತಿಸಿದರು.
ಜೊತೆ ಕಾರ್ಯದರ್ಶಿ ನಮಿತಾ ಗೋಪಿನಾಥ್ ವಂದಿಸಿದರು.