ಕೈಪ ಮಂಗಳಂ ಅಸೆಂಬ್ಲಿ ಅಭ್ಯರ್ಥಿ ಟಿ.ಎಂ.ನಾಸರ್ ರವರ ಚುನಾವಣಾ ಪ್ರಚಾರದಲ್ಲಿ ಜಿ.ಕೆ. ಹಮೀದ್ ಗೂನಡ್ಕ ಭಾಗಿ

0

ಕೈಪ ಮಂಗಳಂ ಅಸೆಂಬ್ಲಿ ಅಭ್ಯರ್ಥಿ ಟಿ.ಎಂ.ನಾಸರ್ ರವರ ಚುನಾವಣಾ ಪ್ರಚಾರದಲ್ಲಿ ಕೈಪಮಂಗಳಂ ಅಸೆಂಬ್ಲಿ ಚುನಾವಣೆ ಬ್ಲಾಕ್ ಕಾಂಗ್ರೆಸ್ ವೀಕ್ಷರಾದ ಜಿ ಕೆ ಹಮೀದ್ ಗೂನಡ್ಕ ಹಾಗೂ ಮೂಸಾನ್ ಕಲೀಂ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಗಳಾದ ಮರಿಯಮ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುನಿಲ್ ಮಂಡಲ ಅಧ್ಯಕ್ಷರಾದ ಶಶಿ, ನಿಯಾಸ್ , ಮಂಡಲ ಉಪಾಧ್ಯಕ್ಷರಾದ ನಾಸಿರ್ ಮುಜೀಬ್ ರಹಿಮಾನ್., ಆಸಿಫ್, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ತಿತರಿದ್ದರು ಏರಿಯಡ್ ಮಂಡಲದ ಎಲ್ಲಾ ಬೂತ್ ಮಟ್ಟದಲ್ಲಿ ಬೇಟಿ ಮಾಡಲಾಯಿತು.


ಎಲ್ಲಾ ಬೂತ್ ಮಟ್ಟದಲ್ಲಿ ಯು .ಡಿ. ಎಫ್ ಅಭ್ಯರ್ಥಿ ಟಿ ಎಂ ನಾಸರ್ ತೆರೆದ ವಾಹನದ ಮೂಲಕ ಮತ ಬೇಟೆ ನಡೆಸಿದರು ಹಾಗೂ ಯು .ಡಿ. ಎಫ್ ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದು ನಾನು ಶಾಸಕನಾಗಿ ಆಯ್ಕೆಯಾದಲ್ಲಿ ಜನರ ಪ್ರಮುಖ ಬೇಡಿಕೆಗಳಾದ ಕುಡಿಯುವ ನೀರು, ರಸ್ತೆ ಬೀಚ್ ಅಬಿವೃದ್ಧಿ, ಪ್ರವಾಸೋದ್ಯಮಕ್ಕೆ ಅವಕಾಶ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡುವುದರ ಮೂಲಕ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಯನ್ನು ಬಡವರಿಗೆ ಜನ ಸಾಮಾನ್ಯರಿಗೆ ತಲುಪಿಸುವ ಭರವಸೆ ನೀಡಿದರು.