ಸುಳ್ಯದ ಸಂತ ಬ್ರಿಜಿತ್ ದೇವಾಲಯದಲ್ಲಿ ಪಾಮ್ ಸಂಡೆ ಆಚರಣೆ

0

ಸುಳ್ಯ ಸಂತ ಬ್ರಿಜಿತ್ ದೇವಾಲಯದಲ್ಲಿ ಮಾ. 29 ರಂದು ಯೇಸುವಿನ ಕಷ್ಟ, ಮರಣ ಮತ್ತು ಪುನರುತ್ಥಾನದ ನೆನಪಿಗಾಗಿ ಆಚರಿಸುವ ಪಾಮ್ ಸಂಡೆ ( ಗರಿಗಳ ಭಾನುವಾರ ) ಯನ್ನು ಭಕ್ತಿಯಿಂದ ಆಚರಿಸಲಾಯಿತು.

ಸಂತ ಬ್ರಿಜಿತ್ ದೇವಾಲಯದ ಧರ್ಮಗುರುಗಳಾದ ಆಲ್ವಿನ್ ಎಡ್ವರ್ಡ್ ಡಿಕುನ್ಹ ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ |ಅಶೋಕ್ ರಾಯನ್ ಕ್ರಾಸ್ತ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಭಕ್ತಾಧಿಗಳು ಈ ಧಾರ್ಮಿಕ ಆಚರಣೆಯಲ್ಲಿ ಭಕ್ತಿಯಿಂದ ಭಾಗವಹಿಸಿದ್ದರು.