ಬೆಳ್ಳಾರೆಯ ಐತಿಹಾಸಿಕ ಸ್ಥಳವಾದ ಬಂಗ್ಲೆಗುಡ್ಡೆಯಲ್ಲಿ ಅಮರ ಸುಳ್ಯ ಹೆರಿಟೇಜ್ ಫೌಂಡೇಷನ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಮಾ.30 ರಂದು ನಡೆಯಿತು.
ನಿವೃತ್ತ ಯೋಧರಾದ ಕ್ಯಾ.ಸುಧಾನಂದ ಪೆರುವಾಜೆಯವರು ಧ್ವಜಾರೋಹಣ ನೆರವೇರಿಸಿದರು.














ಅಮರ ಸುಳ್ಯ ಹೆರಿಟೇಜ್ ಫೌಂಡೇಷನ್ ಅಧ್ಯಕ್ಷ ಅನಿಂದಿತ್ ಕೊಚ್ವಿಯವರು ಮಾತನಾಡಿ ಬೆಳ್ಳಾರೆಯ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆಯಲ್ಲಿ ಜನರು ಒಟ್ಟಾಗಿ ಸೇರಿ ಜನರಿಂದಲೇ ಪ್ರಾರಂಭವಾದ ಸಂಘಟಿತ ಹೋರಾಟ ಸ್ವಾಭಿಮಾನದಿಂದ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ನಡೆಸಿದರು.

ಬ್ರಿಟೀಷರ ದಬ್ಬಾಳಿಕೆ ವಿರುದ್ಧ ಹೋರಾಡಿದ ದಿನ.ಹೋರಾಟ ಮಾಡಿದ ಸ್ಥಳ ಬಂಗ್ಲೆಗುಡ್ಡೆ.
ಅವತ್ತು ತ್ಯಾಗ ಮಾಡಿದ ದಿನವಾಗಿದ್ದು ವೀರ ಹಿರಿಯರಿಗೆ ನಮನ ಸಲ್ಲಿಸುವ ಸಲುವಾಗಿ ಇಂದು ಮಾ. 30 ರಂದು ಊರಿನವರನ್ನು ಒಟ್ಟಿಗೆ ಸೇರಿಸಿಕೊಂಡು ಧ್ವಜಾರೋಹಣ ಮಾಡಿದ್ದೇವೆ ಎಂದು ಹೇಳಿದರು.
ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲುರವರು ಮಾತನಾಡಿ 1837 ನೇ ಇಸವಿ ಮಾ.30ರಂದು ಭಾರತದ ಇತಿಹಾಸದ ಪ್ರಥಮ ಜನರಿಂದ ಸೇರಿದ ಸಂಘಟಿತ ಹೋರಾಟ ಬ್ರಿಟೀಷರ ವಿರುದ್ಧ ನಡೆಯಿತು ಎನ್ನುವ ಉಲ್ಲೇಖ ಇದೆ.
ರಾಜರು ಅವರವರ ಅಧಿಪತ್ಯ ಕಾಪಾಡಲು ಹೋರಾಟ ಮಾಡಿರುವುದು ಬಹಳಷ್ಟು ಇದೆ.ಜನರು ನ್ಯಾಯಕ್ಕಾಗಿ ಬ್ರಿಟಿಷರ ವಿರುದ್ದ ಸೆಟೆದು ನಿಂತು ಸಂಘಟಿತರಾದ ವಿಶೇಷ ದಿನವನ್ನು ಸಂಭ್ರಮಿಸುವ ಕರ್ತವ್ಯ ನಮ್ಮದು ಆ ನಿಟ್ಟಿನಲ್ಲಿ ಇಂದು ಕಾರ್ಯಕ್ರಮವನ್ನು ಮಾಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರಿಪುರ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಹಾಸ ಮಣಿಯಾಣಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯಕ್, ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾದ ಭಾಸ್ಕರ ನೆಟ್ಟಾರು,ಶ್ರೀಮತಿ ಭಾರತಿ ಕೊಚ್ಚಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ನಮಿತಾ ಎಲ್.ರೈ, ಚಂದ್ರಶೇಖರ ಪನ್ನೆ, ಸುಧಾಕರ ಕೊಚ್ಚಿ, ಪದ್ಮನಾಭ ಪೆರುವಾಜೆ,
ಶ್ಯಾಂಪ್ರಕಾಶ್ ಕುರುಂಬುಡೇಲು,ಸಾಯಿಪ್ರಸಾದ್ ನೆಟ್ಟಾರು,ಗಣೇಶ್ ಕೊಚ್ವಿ,ದಿಲೀಪ್ ಗಟ್ಟಿಗಾರು,ಗ್ರಾ.ಪಂ.ಮಾಜಿ ಸದಸ್ಯೆ ಜಯಶ್ರೀ ಮತ್ತಿತರರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕಿ ಸಹನಾರವರು ಕಾರ್ಯಕ್ರಮ ನಿರೂಪಿಸಿ,ಶೈಲೇಶ್ ನೆಟ್ಟಾರು ವಂದಿಸಿದರು.







