















ಮುರುಳ್ಯ ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವವು ಮೇ ೧೯, ೨೦ ರಂದು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಕೆ.ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಹಾಗೂ ಸಾರ್ವಜನಿಕ ಸತ್ಯನಾರಾಯಣ ಪೂಜೆ ವಿಜೃಂಭಣೆಯಿಂದ ನಡೆಯಲಿರುವುದು ಮತ್ತು ದೇವಾಲಯದ ಅಭಿವೃದ್ಧಿ ಕಾಮಗಾರಿಯು ಪೂರ್ಣಗೊಂಡು ಸ್ವಾಮೀಜಿಯವರಿಂದ ಉದ್ಘಾಟನೆಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ, ಮಹಾ ಅನ್ನಸಂತರ್ಪಣೆ ನಡೆಯುವ ಪ್ರಯುಕ್ತ ಜಾತ್ರೋತ್ಸವ ಯಶಸ್ವಿಗಾಗಿ ಆಡಳಿತ ಸಮಿತಿ ಉತ್ಸಾಹ ಸಮಿತಿ, ಸೇವ ಸಮಿತಿ, ಭಜನ ಮಂಡಳಿ, ಮಹಿಳಾ ಸಮಿತಿಗಳು, ಸೇರಿ ಎಪ್ರಿಲ್ ೨೯ರಂದು ದೇವಾಲಯದ ಟ್ರಸ್ಟ್ ಅಧ್ಯಕ್ಷ ಪಿ ರಾಮಚಂದ್ರ ಭಟ್ ರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಎಲ್ಲರ ಸಲಹೆ ಸೂಚನೆಗಳನ್ನು ಪರಿಗಣಿಸಿ ನಿರ್ಣಯ ಮಾಡಲಾಯಿತು.
ಈ ಸಂದರ್ಭದಲ್ಲಿ ಕೇಶವ ಭಟ್ ಮಾನಸವನ, ರಾಮಕೃಷ್ಣ ಭಟ್ ಕಳತ್ತಜೆ, ಅನೂಪು ಬಿಳಿಮಲೆ, ಜನಾರ್ದನ ಅಲೆಕ್ಕಾಡಿ, ಶ್ರೀಮತಿ ಸರಸ್ವತಿ ಗಣಪಯ್ಯ ಆಲಾಜೆ, ವಿಠಲ ರೈ ಪೋಲಾಜೆ, ದೇವಾಲಯದ ಪ್ರಧಾನ ಅರ್ಚಕರಾದ ವೇದಮೂರ್ತಿ ಸೂರ್ಯನಾರಾಯಣ ಭಟ್ ಕೆ., ವಿಶ್ವನಾಥ ರೈ ಪೋನಡ್ಕ, ಧೀರಜ್ ಮೂಲ್ಯತ್ತಾರ, ದಿವೀಶ್ ಮುರುಳ್ಯ, ದಿವಾಕರ ರೈ ಪೊಗ್ಗೋಳಿ, ಸುಂದರ ರೈ ಪೋಲಾಜೆ, ಚಂದ್ರಶೇಖರ ಗೌಡ, ಮೇದಪ್ಪ ಗೌಡ ಮಾನ್ಯಡ್ಕ, ಉದಯಕುಮಾರ್ ಕುಲಾಲ್, ಕುಶಾಲಪ್ಪ ಗೌಡ, ಸೂರಪ್ಪ ಗೌಡ ಆಲೇಕಿ , ರಂಜಿತ್ ಆಲೇಕಿ, ವೆಂಕಟರಮಣ ಗೌಡ, ಪ್ರೇಮ ಸರಳಿಕಾನ, ದುರ್ಗಾದೇವಿ ಸರಳಿಕಾನ, ಸುಮಿತ್ರ ಸರಳಿಕಾಲ, ನೀಲಾವತಿ ತೋಟ, ಜಯರಾಮ ಕಾಪುತಡ್ಕ ಮೊದಲಾದವರಿದ್ದರು.








