














ಮನುಕುಲದ ಉದ್ದಾರಕ್ಕಾಗಿ ಯೇಸು ಕ್ರಿಸ್ತರು ಶಿಲುಬೆಯಲ್ಲಿ ಮರಣ ಹೊಂದಿದ ಸ್ಮರಣಾರ್ಥ ಶುಭ ಶುಕ್ರವಾರ (ಗುಡ್ ಫ್ರೈಡೆ) ವನ್ನು ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಂತ ಬ್ರಿಜಿಡ್ಸ್ ದೇವಾಲಯ ಸುಳ್ಯ ಇಲ್ಲಿ ಧರ್ಮಗುರುಗಳಾದ ಫಾದರ್ ಆಲ್ವಿನ್ ಎಡ್ವರ್ಡ್ ಡಿಕುನ್ಹರವರ ನೇತೃತ್ವದಲ್ಲಿ ಭಕ್ತಿ ಪೂರ್ವಕವಾಗಿ ಆಚರಿಸಲಾಯಿತು.

ಪವಿತ್ರ ಶಿಲುಬೆಯ ಹಾದಿ, ಪರಮ ಪ್ರಸಾದದ ಆರಾಧನೆ ಜೊತೆಗೆ ಶುಭ ಶುಕ್ರವಾರದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಭಕ್ತಾದಿಗಳು ಭಕ್ತಿಯಿಂದ ಈ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡು ಯೇಸುವಿನ ಕಷ್ಟ ಯಾತನೆ ಮತ್ತು ಮರಣದ ಸ್ಮರಣೆ ಮಾಡಿ, ಯೇಸುವಿನ ಆಶೀರ್ವಾದವನ್ನು ಬೇಡಿಕೊಂಡರು.







