ಏ.11 ,12 ಕೊಡಗು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ

0

ಕೊಡಗು ಸಂಪಾಜೆ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಾಲಾವಧಿ ಜಾತ್ರೋತ್ಸವವು ಏಪ್ರಿಲ್ 11 ಮತ್ತು 12 ರಂದು ವಿಜೃಂಭಣೆಯಿಂದ ನಡೆಯಲಿದೆ.

ಏ.11 ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವುದು, ಪರಿವಾರ ದೈವಗಳ ತಂಬಿಲ, ಮಧ್ಯಾಹ್ನ ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಗೆ ತಂತ್ರಿಗಳ ಆಗಮನ, ದೇವತಾ ಪ್ರಾರ್ಥನೆ, ಪಶುಧಾನ ಪುಣ್ಯಾಹ, ಪ್ರಸಾದ ಶುದ್ಧಿ, ರಾಕ್ಷೋಘ್ನ ಮಾಡಿ ಹೋಮ , ವಾಸ್ತು ಹೋಮ, ವಾಸ್ತು ಬಲಿ, ರಂಗ ಪೂಜೆ ಬಳಿಕ ಪ್ರಸಾದವಿತರಣೆ, ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.

ಏಪ್ರಿಲ್ 12 ರಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ಬಿಂಬ ಶುದ್ದಿ ಕಲಶ ಪೂಜೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 7 ರಿಂದ ದೀಪಾರಾಧನೆ, ಹವಿಸು ಪೂಜೆ, ಭೂತ ಬಲಿ, ಶ್ರೀ ದೇವರ ನೃತ್ಯ ಬಲಿ, ಬಟ್ಟಲು ಕಾಣಿಕೆ ಪ್ರಸಾದ ವಿತರಣೆ ನಡೆಯಲಿದೆ.

ಊರ ಪರವೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ಗಂಧ ಪ್ರಸಾದ ಪಡೆದು ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷ, ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿ ಸರ್ವ ಸದಸ್ಯರು ,
ಊರಿನ ಸಮಸ್ತ ಭಕ್ತಾಧಿಗಳು ತಿಳಿಸಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳು :

ಏ 11 ರಂದು ಬೆಳಿಗ್ಗೆ 10 ಗಂಟೆಗೆ “ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವಿರಾಜ ಪೇಟೆ” ವಿದೂಷಿ ಪ್ರೇಮಾಂಜಲಿ ಆಚಾರ್ಯ ತಂಡದವರಿಂದ ನಾಟ್ಯ ವೈಭವ, ಅಪರಾಹ್ನ 3 ಗಂಟೆಯಿಂದ 7 ತಂಡಗಳಿಂದ ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 7 ಗಂಟೆಯಿಂದ ವಿದೂಷಿ ಇಂದು ಮತಿ ನಾಗೇಶ್ ಶಿಷ್ಯ ವೃಂದದವರಿಂದ ನಟರಾಜ ನೃತ್ಯ ನಿಕೇತನ ರಿ ಕಲ್ಲುಗುಂಡಿ ಅವರಿಂದ ಭರತ ನಾಟ್ಯ ವೈಭವ , ರಾತ್ರಿ 9 ರಿಂದ ಆದರ್ಶ ಮಹಿಳಾ ತಂಡ ಚಡಾವು ಇವರಿಂದ ಕರಗ ನೃತ್ಯ, ಕೊಯನಾಡು ಶ್ರೀ ರತ್ನಶ್ರೀ ಜ್ಞಾನ ವಿಕಾಸ ಮಹಿಳಾ ಸದಸ್ಯರಿಂದ ಜ್ಞಾನಪದ ನೃತ್ಯ ನಡೆಯಲಿದೆ. ಏ 12 ರಂದು ಬೆಳಿಗ್ಗೆ 10 ರಿಂದ ಸಂಪಾಜೆ ಸವಿತಾ ಕಿರಣ್ ತಂಡದಿಂದ ನೃತ್ಯ ವೈವಿಧ್ಯ, ಮಧ್ಯಾಹ್ನ 1 ಗಂಟೆಗೆ ಸಂಪಾಜೆ ಕುಣಿತಾ ಭಜನಾ ತಂಡದಿಂದ ಕುಣಿತ ಭಜನೆ, ಬಳಿಕ ಆರಾಧ್ಯ ಮತ್ತು ಆದ್ಯ ಅಂಬ್ರೋಟಿ ಇವರಿಂದ ಭರತ ನಾಟ್ಯ , ಬಳಿಕ 8 ತಂಡಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ ಸುಳ್ಯ ಸಾಹಿತ್ಯ ಸಂಗೀತ ಕಲಾ ಕೇಂದ್ರದಿಂದ ಭಕ್ತಿ ಭಾವ ಜಾನಪದ ಸಂಗೀತ ಕಾರ್ಯಕ್ರಮ, ಭಕ್ತಿ ಸುಧಾ , ರಾತ್ರಿ 12 ರಿಂದ ಉಜಿರೆ ಮಂದಾರ ಕಲಾವಿದರಿಂದ ಅಜ್ಜಿಗ್ ಏರ್ ಲ ಇಜ್ಜಿ ತುಳು ನಾಟಕ ನಡೆಯಲಿದೆ.