ಕಲ್ಮಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಕೃಷಿಕ ಸಾಯಿನಾರಾಯಣ ಕಲ್ಮಡ್ಕ ರವರ ಧರ್ಮಪತ್ನಿ ಶ್ರೀಮತಿ ರೂಪಾ ಸಾಯಿನಾರಾಯಣರವರು ಬಹುಅಂಗಾಂಗ ವೈಫಲ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು 41 ವರ್ಷ ವಯಸ್ಸಾಗಿತ್ತು.














ವೈದೇಹಿ ಮಹಿಳಾ ಮಂಡಲದ ಅಧ್ಯಕ್ಷೆಯಾಗಿ ಸಕ್ರಿಯರಾಗಿದ್ದ ರೂಪಾರವರು ಮಹಿಳಾ ಮಂಡಲದ ಮೂಲಕ ಶಾರದೋತ್ಸವ ಆಚರಿಸುತ್ತಾ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚೆಂಡೆ ವಾದನ ಕಲಿತು ಇತರರಿಗೆ ತರಬೇತಿ ನೀಡಿ ತಾನೇ ಒಂದು ಸಂಘ ಕಟ್ಟಿದ್ದರು. ಕಲ್ಮಡ್ಕ ಪರಿಸರದಲ್ಲಿ ಕ್ರಿಯಾಶೀಲರಾಗಿ ಜನರೊಂದಿಗೆ ಬೆರೆಯುತ್ತಿದ್ದರು.
ಇತ್ತೀಚೆಗೆ ಕೆಲಸಮಯದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದ ಅವರು ಬಹುಅಂಗಾಂಗ ವೈಫಲ್ಯಕ್ಕೊಳಗಾಗಿದ್ದರು.
ಮರ್ಕಂಜದ ನಿವೃತ್ತ ಅಂಚೆಪಾಲಕ ಆರ್.ಎಲ್.ರಾವ್ ರವರ ಪುತ್ರಿಯಾದ ಇವರು ಪತಿ, ಮಕ್ಕಳಾದ ಪ್ರಧಾನ್ ಮತ್ತು ಪ್ರಜ್ಞಾನ್, ಮಾವ ಕೆ.ಎನ್. ಪರಮೇಶ್ವರಯ್ಯ, ಅತ್ತೆ ಶ್ರೀಮತಿ ಶಕುಂತಲಾ, ತಾಯಿ ಜಯಲಕ್ಷ್ಮಿ, ಸಹೋದರಿ ಶ್ರೀಮತಿ ರಮ್ಯ ರಾವ್ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.







