ಎ.19: ಕೊಯಿಕುಳಿ ‌ಶ್ರೀಕೃಷ್ಣ ಸೇವಾ ಸಮಿತಿ ವತಿಯಿಂದ ಭಾಗವತ ಜಯಾನಂದ ಪಾನತ್ತಿಲರಿಗೆ ಸನ್ಮಾನ- ಸಭಾಭವನ ಉದ್ಘಾಟನೆ

0

ಶ್ರೀ ಕೃಷ್ಣ ಸೇವಾ ಸಮಿತಿ, ಶ್ರೀ ಕೃಷ್ಣ ಮಂದಿರ ಕೊಯಿಕುಳಿ,ದುಗ್ಗಲಡ್ಕ ಇದರ ಆಶ್ರಯದಲ್ಲಿ ಹಿರಿಯ ಯಕ್ಷಗಾನ ಭಾಗವತರಾದ ಜಯಾನಂದ ಪಾನತ್ತಿಲ ( ಕುಂಬೆತ್ತಿಬನ) ಇವರಿಗೆ ಹುಟ್ಟೂರ ಅಭಿನಂದನೆ ಮತ್ತು ಸನ್ಮಾನ ಕಾರ್ಯಕ್ರಮ ಹಾಗೂ ನೂತನವಾಗಿ ನಿರ್ಮಿಸಿರುವ ನೀರಬಿದಿರೆ ಮಹಾಲಿಂಗೇಶ್ವರ ಭಟ್ ಸ್ಮಾರಕ ಸಭಾಭವನದ ಉದ್ಘಾಟನೆ ಎ.19 ರಂದು ನಡೆಯಲಿದೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಸ್ವಯಂಪ್ರಕಾಶ್ ನೀರಬಿದಿರೆ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ನೇರವೇರಿಸಲಿದ್ದಾರೆ.ಕರ್ನಾಟಕ ಸರಕಾರದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಭಿನಂದಿಸಲಿದ್ದಾರೆ. ಚಿಂತಕರಾದ ರಾಮಕೃಷ್ಣ ಭಟ್ ಚೊಕ್ಕಾಡಿ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಕಾರ್ಯಕ್ರಮದ ಅಂಗವಾಗಿ ಅಂದು ಬೆಳಿಗ್ಗೆ 9 ರಿಂದ ವಿಶೇಷ ಭಜನೆ ಮತ್ತು ದೇವತಾರಾಧನೆ,10.30 ರಿಂದ ಅಭಿನಂದನಾ ಕಾರ್ಯಕ್ರಮ, ಅಪರಾಹ್ನ 1.30ರಿಂದ ನಾಟ್ಯಗುರು ಬಾಲಕೃಷ್ಣ ನಾಯರ್ ನೀರಬಿದಿರೆ ಸಂಯೋಜನೆಯಲ್ಲಿ ಶ್ರೀ ಕೃಷ್ಣ ಲೀಲೆ- ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.