ಮುಳ್ಯಕಜೆಯಲ್ಲಿ ರೂ.20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಶ್ರೀ ಸತ್ಯಪದಿನಾಜಿ ಶ್ರೀ ಗುಳಿಗ ಮತ್ತು ಶ್ರೀ ಕೊರಗಜ್ಜ ದೈವಸ್ಥಾನ

0

ಎ.12ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಅಜ್ಜಾವರ ಗ್ರಾಮದ ಮುಳ್ಯಕಜೆ ಎಂಬಲ್ಲಿ ಶ್ರೀ ಸತ್ಯಪದಿನಾಜಿ ಶ್ರೀ ಗುಳಿಗ ಮತ್ತು ಶ್ರೀ ಕೊರಗಜ್ಜ ದೈವಸ್ಥಾನ ರೂ.೨೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಎ.೮ರಿಂದ ೧೨ರವರೆಗೆ ಪ್ರತಿಷ್ಠಾ ಬ್ರಹ್ಮಕಲ ಶೋತ್ಸವ ನಡೆಯಲಿದೆ.
ಮುಳ್ಯಕಜೆ ಪ್ರದೇಶದಲ್ಲಿನ ಜನರಿಗೆ ಕಷ್ಟ ನೋವುಗಳು ಬಂದಾಗ ಅವರು ಪ್ರಶ್ನಾ ಚಿಂತನೆಯ ಮೊರೆ ಹೋದರು. ಈ ವೇಳೆ ಪ್ರಶ್ನೆಯಲ್ಲಿ ಶ್ರೀ ಸತ್ಯಪದಿನಾಜಿ ಶ್ರೀ ಗುಳಿಗ ಮತ್ತು ಶ್ರೀ ಕೊರಗಜ್ಜ ದೈವಸ್ಥಾನ ಆಗಬೇಕೆಂದು ಕಂಡು ಬಂದುದರಿಂದ ೫ ವರ್ಷಗಳ ಹಿಂದೆ ಸಂಕಲ್ಪ ಮಾಡಿ ಕೆಲಸ ಆರಂಭಿಸಿದರು. ಈ ಪ್ರದೇಶದಲ್ಲಿರುವ ೩೯ ಮನೆಗಳವರು ದೇಣಿಗೆಯನ್ನಿತ್ತು ದೈವಸ್ಥಾನದ ನಿರ್ಮಾಣ ಕಾರ್ಯ ಮಾಡಿದ್ದಾರೆ. ಊರವರ ಸಹಕಾರವನ್ನು ಪಡೆದಿದ್ದಾರೆ. ಇದೀಗ ಕೆಲಸ ಪೂರ್ಣಗೊಂಡಿದೆ.
ಸುದರ್ಶನ ಹೋಮ : ನೂತನ ದೈವಸ್ಥಾನದಲ್ಲಿ ಎ.೮ರಂದು ರಾತ್ರಿ ಸುದರ್ಶನ ಹೋಮ, ಪ್ರೇತಾ ಆವಾಹನೆ, ಬಾಧ ಉಚ್ಛಾಟನೆ ನಡೆಯಿತು.
ಎ.೧೧ರಂದು ಬೆಳಗ್ಗೆ ಉಗ್ರಾಣ ತುಂಬಿಸುವುದು. ಸಂಜೆ ೫ ಕ್ಕೆ ತಂತ್ರಿಗಳ ಆಗಮನ ಆಗುವುದು. ಪೂರ್ಣಕುಂಭ ಸ್ವಾಗತದೊಂದಿಗೆ ತಂತ್ರಿ ವರ್ಯರನ್ನು ಬರಮಾಡಿಕೊಳ್ಳಲಾಗುವುದು.
ರಾತ್ರಿ ಸಾಮೂಹಿಕ ಪ್ರಾರ್ಥನೆ, ಸ್ವತಿ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಬಲಿ, ದಿಕ್ಕು ಬಲಿ. ಎ.೧೨ರಂದು ಬೆಳಗ್ಗೆ ೬ ಕ್ಕೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ವೃಷಭ ಲಗ್ನದಲ್ಲಿ ಗುರು ಪ್ರತಿಷ್ಠೆ – ಕಲಶಾಭಿಷೇಕ, ಮಹಾಪೂಜೆ, ನಿತ್ಯ ನೇಮಿತ್ಯ – ಪ್ರಾರ್ಥನೆ, ಪ್ರಸಾದ ವಿತರಣೆ ನಡೆಯುವುದು. ಪ್ರತಿಷ್ಠಾ ಕಲಶೋತ್ಸವದ ಪ್ರಯುಕ್ತ ಅನ್ನದಾನ ನಡೆಯುವುದು