

ಅದ್ವೈತ್ ಜೆಸಿಬಿಯವರ ನೂತನ ಜೆಸಿಬಿ ಯಂತ್ರಗಳ ಅನಾವರಣ ಕಾರ್ಯಕ್ರಮ ಎ.09ರಂದು ರಾತ್ರಿ ಸುಳ್ಯದ ಬಂಟರ ಭವನದಲ್ಲಿ ನಡೆಯಿತು.














ಮುಖ್ಯ ಅತಿಥಿಗಳಾಗಿ ಜೆಸಿಬಿ ಇಂಡಿಯಾ ಲಿಮಿಟೆಡ್ ನ ಸಿಇಒ ಹಾಗೂ ಎಂಡಿ ದೀಪಕ್ ಶೆಟ್ಟಿ, ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ನ ಎಕ್ಸಿಕ್ಯೂಟಿವ್ ವೈಸ್ ಚೇರ್ಮನ್ ಉಮೇಶ್ ಜಿ. ರೇವನ್ ಕರ್ ಭಾಗವಹಿಸಿ ನೂತನ ಯಂತ್ರಗಳನ್ನು ಅನಾವರಣ ಮಾಡಿ ಶುಭ ಹಾರೈಸಿದರು.

ದೀಪಕ್ ಶೆಟ್ಟಿ, ಉಮೇಶ್ ಜಿ. ರೇವನ್ ಕರ್ ರವರನ್ನು ಇದೇ ಸಂದರ್ಭ ಅದ್ವೈತ್ ಜೇಸಿಬಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ರಾಮ್ ಫೈನಾನ್ಸ್ ನಲ್ಲಿ ಸಿಒಒ, ಜೋಯಿಂಟ್ ಎಂಡಿ. ಸುದರ್ಶನ್ ಹೊಳ್ಳ, ಜೆಸಿಬಿ ಇಂಡಿಯಾ ಲಿಮಿಟೆಡ್ ನ ಇವಿಪಿ ಎನ್. ಬಾಬು, ಎಸ್ ವಿ ಪಿ ಬಾಲ ಗಣಪತಿ ರಾಮನ್ ಸೇರಿದಂತೆ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು. ಅದ್ವೈತ್ ಜೆಸಿಬಿ ಸಿಇಒ ರಂಜಿತ್ ರೈ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.

ಆಗಮಿಸಿದ ಎಲ್ಲರಿಗೂ ಸಸ್ಯಹಾರಿ ಮತ್ತು ಮಾಂಸಹಾರಿ ಭೋಜನದ ವ್ಯವಸ್ಥೆ ಮಾಡಲಾಯಿತು.
ಅನಾವರಣಗೊಂಡ ನೂತನ ಯಂತ್ರಗಳು
JCB 30Z , JCB 31C , JCB 35Z , JCB36R, JCB 81 Eco Excavator, JCB Diesel Generator, JCB Asseess Platform ಎಂಬ ನೂತನ ಜೇಸಿಬಿ ಯಂತ್ರಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ಹಲವು ಉದ್ಯಮಿಗಳಿಂದ ನೂತನ ಜೆಸಿಬಿ ಯಂತ್ರಗಳ ಖರೀದಿ
ಈ ಸಂದರ್ಭದಲ್ಲಿ ಸಂತೋಷ್ ರೈ ಬೋಳಿಯಾರು, ಗಣೇಶ್ ಸ್ಕಂದಶ್ರೀ, ರವಿ ಬಿಸಿರೋಡ್, ಪೂರ್ಣಚಂದ್ರ ಸುಳ್ಯ, ಸೀತಾರಾಮ ಸುಳ್ಯ, ಮುರಳಿ ಪಂಜ, ರಾಜೇಶ್ ಕಿರಿಭಾಗ, ಬಶೀರ್ ಪೈಚಾರು ರವರು ನೂತನ ಜೆಸಿಬಿ ಯಂತ್ರವನ್ನು ಖರೀದಿಸಿದರು.ಅವರಿಗೆ ದೀಪಕ್ ಶೆಟ್ಟಿಯವರು ಕೀಲಿ ಕೈ ಹಸ್ತಾಂತರಿಸಿ ಶಾಲು ಹೊದಿಸಿ ಗೌರವಿಸಿದರು.
ಸುಳ್ಯದ ಬಂಟರ ಸಂಘದಿಂದ ಗೌರವ
ಜೆಸಿಬಿ ಇಂಡಿಯಾ ಲಿಮಿಟೆಡ್ ನ ಸಿಇಒ, ಎಂಡಿ ದೀಪಕ್ ಶೆಟ್ಟಿ ಹಾಗೂ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ನ ಎಕ್ಸಿಕ್ಯೂಟಿವ್ ವೈಸ್ ಚೇರ್ಮನ್ ಉಮೇಶ್ ಜಿ. ರೇವನ್ ಕರ್ ರವರನ್ನು ಇದೇ ಸಂದರ್ಭದಲ್ಲಿ ಸುಳ್ಯ ಬಂಟರ ಸಂಘದ ಪದಾಧಿಕಾರಿಗಳು ಗೌರವಿಸಿದರು.







