ಸರಸ್ವತಿ ಸೌಹಾರ್ದ ಸಹಕಾರ ಸಂಘದ ವೃತ್ತಿಪರ ‌ನಿರ್ದೇಶಕರಾಗಿ ಅನಂತಕೃಷ್ಣ ಚಾಕೋಟೆ ನೇಮಕ

0

ಸರಸ್ವತಿ ಸೌಹಾರ್ದ ಸಹಕಾರ ಸಂಘದ ವೃತ್ತಿಪರ ನಿರ್ದೇಶಕರಾಗಿ ಅನಂತಕೃಷ್ಣ ಚಾಕೋಟೆಯವರು ನೇಮಕಗೊಂಡಿದ್ದಾರೆ.

ಮಂಡೆಕೋಲು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವಿವಿಧ ಸಂಘಗಳಲ್ಲಿ ಸಕ್ರಿಯವಾಗಿರುವ ಇವರು ಸಮಾಜಮುಖಿ ಕಾರ್ಯದಲ್ಲಿ ನಿರಂತರ ತೊಡಗಿಸಿಕೊಂಡಿದ್ದಾರೆ.

ಮಂಡೆಕೋಲು ಗ್ರಾಮದ ಚಾಕೋಟೆಯವರಾದ ಅನಂತಕೃಷ್ಣರ ಪತ್ನಿ ಶಾರದಾ ಟಿ ಗೃಹಿಣಿಯಾಗಿದ್ದಾರೆ. ಮಗಳು ಅದಿತಿ ಎ. ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ ಅಂತಿಮ ಬಿಎಸ್ಸಿ ಪದವಿಯಲ್ಲಿ ಓದುತಿದ್ದಾರೆ.