ಸುಬ್ರಹ್ಮಣ್ಯ: ಬಿ. ಎಮ್. ಎಸ್ ಆಟೋ ರಿಕ್ಷಾ ಚಾಲಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

0

ಅಧ್ಯಕ್ಷರಾಗಿ ಕಿರಣ್ ಪೈಲಾಜೆ, ಕಾರ್ಯದರ್ಶಿಯಾಗಿ ಗಗನ್

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ
ಬಿ. ಎಮ್. ಎಸ್ ಸಂಯೋಜಿತ ಸುಬ್ರಹ್ಮಣ್ಯ ಘಟಕ ಇದರ ವಾರ್ಷಿಕ ಮಹಾಸಭೆಯು ಏ. 13 ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಸತೆಯನ್ನು ಸುಬ್ರಹ್ಮಣ್ಯ ಬಿ. ಎಮ್. ಎಸ್ ಘಟಕದ ಸುಬ್ಬಪ್ಪ ಕುಲ್ಕುoದ ವಹಿಸಿದರು.
ಸುಳ್ಯ ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಪ್ರಕಾಶ್ , ಉಪಾಧ್ಯಕ್ಷರಾದ ಪ್ರಶಾಂತ್ ಭಟ್, ಕೊಶಧಿಕಾರಿ ರವಿ ಜಾಲ್ಸೂರು ಉಪಸ್ಥಿತರಿದ್ದರು.
ಸಭೆಯಲ್ಲಿ ವಾರ್ಷಿಕ ವರದಿಯನ್ನು ಹರ್ಷಿತ್ ವಾಚಿಸಿದರು.
ಲೆಕ್ಕ ಪತ್ರವನ್ನು ದಿವಾಕರ ಸಭೆಯ ಮುಂದಿಟ್ಟು ಅನುಮೋದನೆ ಪಡೆಯಲಾಯಿತು
2026-27 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆದು
ಬಿ. ಎಮ್. ಎಸ್ ಸುಬ್ರಹ್ಮಣ್ಯ ಘಟಕದ ನೂತನ
ಅಧ್ಯಕ್ಷರಾಗಿ ಕಿರಣ್ ಪೈಲಾಜೆ,
ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್,
ಕಾರ್ಯದರ್ಶಿ ಯಾಗಿ ಗಗನ್ (ಧನಂಜಯ ), ಗೌರವಧ್ಯಕ್ಷರಾಗಿ ಗಣೇಶ್ ಹೊಸೋಳಿಕೆ
ಜತೆ ಕಾರ್ಯದರ್ಶಿಯಾಗಿ ಜಯಂತ,
ಸಂಘಟನ ಕಾರ್ಯದರ್ಶಿಯಾಗಿ ಯಶೋಧರ, ಕೊಶಾಧಿಕಾರಿಯಾಗಿ ಮನೋಹರ್. ಕಾರ್ಯಕಾರಿಣಿ ಸದಸ್ಯರುಗಳಾಗಿ  ವಿಕಾಸ್, ಜನಾರ್ಧನ, ತೀರ್ಥಪ್ರಸಾದ್, ಬಾಲಕೃಷ್ಣ, ರವಿ ಕೊಣಾಜೆ. ಸರ್ವನುಮತದಿಂದ ಆಯ್ಕೆಯಾದರು.
ಸಂಘಟನಾ ಕಾರ್ಯದರ್ಶಿ ಯಶೋಧರ ಧನ್ಯವಾದ ಮಾಡಿದರು.