













ಡ್ಯಾನ್ಸ್ & ಬೀಟ್ಸ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಸುಗಮ ಸಂಗೀತ ಗಾಯಕ ಡಾ. ಕಿರಣ್ ಕುಮಾರ್ ಪುತ್ತೂರುರವರ ನೇತೃತ್ವದ ಗಾನಸಿರಿ ಕಲಾಕೇಂದ್ರ ಪುತ್ತೂರು ಇವರು ರಜತ ವರ್ಷದ ಪ್ರಯುಕ್ತ ಪಂಜದ ಪ್ರತಿಭಾನ್ವಿತ ಗಾಯಕಿ ಸುಮಾ ಕೋಟೆಯವರಿಗೆ ಕೊಡಮಾಡಿದ ರಾಜ್ಯಮಟ್ಟದ ಗಾನಸಿರಿ ಸಾಧನಾ ಸಿರಿ ರಾಜ್ಯ ಪ್ರಶಸ್ತಿಯ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಎ.೦೫ರಂದು ನಡೆಯಿತು.
ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಮತ್ತು ಖ್ಯಾತಗಾಯಕಿ ಹಾಗೂ ಸಂಗೀತ ನಿರ್ದೇಶಕಿಯಾದ ಶ್ರೀಮತಿ ಜಯಶ್ರೀ ಅರವಿಂದ ಬೆಂಗಳೂರು ಇವರು ಪ್ರಶಸ್ತಿ ಪ್ರದಾನಗೈದರು. ಗಾನಸಿರಿ ಡಾ. ಕಿರಣ್ ಕುಮಾರ್ ಉಪಸ್ಥಿತರಿದ್ದರು.







