ಮಾವಿನಕಟ್ಟೆ ತಿರುವಿನಲ್ಲಿ ಬೊಲೆರೋ ವಾಹನ ಪಲ್ಟಿಯಾಗಿ ವಾಹನದಲ್ಲಿದ್ದ ಪ್ರಯಾಣಿಕರಿಗೆ ಗಾಯಗೊಂಡಿರುವ ಘಟನೆ ಏಪ್ರಿಲ್ 17 ರಂದು ರಾತ್ರಿ ಸಂಭವಿಸಿದೆ.














ಅಪಘಾತಕ್ಕೊಳಗಾದ ವಾಹನ ಉಪ್ಪಿನಂಗಡಿ ನಿವಾಸಿ ಇರ್ಫಾನ್ ಎಂಬುವವರದಾಗಿದ್ದು ಅವರು ಕೊಡಗಿನ ಎಮ್ಮೆಮಾಡಿಗೆ ಹೋಗಿ ಮರಳಿ ಬರುವಾಗ ಈ ಅಪಘಾತ ಸಂಭವಿಸಿದೆ.
ಸ್ಥಳೀಯ ನಿವಾಸಿ ಹಸೈನಾರ್ ವಳಲಂಬೆ ಯವರು ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವಾಹನದಲ್ಲಿದ್ದ ಇನ್ನೂ ಕೆಲವರು ಜೀರ್ಮುಕ್ಕಿಯ ಮನೆಯೊಂದರಲ್ಲಿ ಸ್ಥಳೀಯರು ಇರಿಸಿಕೊಂಡು ಉಪಚರಿಸಿದ್ದಾರೆ.

ಮರಕ್ಕೆ ಡಿಕ್ಕಿ ಹೊಡೆದ ಬೊಲೆರೂ ರಸ್ತೆ ಬದಿಗೆ ಪಲ್ಟಿಯಾಗಿ ಬಿದ್ದಿದೆ.
ವಾಹನ ಪಲ್ಟಿಯಾದ ಸಂಧರ್ಭ ಸ್ಥಳೀಯರು ಕೂಡಲೆ ರಕ್ಷಣಾ ಕಾರ್ಯಕ್ಕೆ ಮುಂದಾಗಿ ವಾಹನದಿಂದ ಪ್ರಯಾಣಿಕರನ್ನು ಹೊರ ತರುವಲ್ಲಿ ಸಹಕಾರ ಮಾಡಿದ್ದಾರೆ. ಪಲ್ಟಿಯಾದ ವಾಹನದಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದು ಹೆಚ್ಚಿನ ಅನಾಹುತದಿಂದ ಪಾರಾಗಿದ್ದಾರೆ.







