
ತೊಡಿಕಾನ ಅಂಗನವಾಡಿ ಕೇಂದ್ರಕ್ಕೆ ಅಕ್ಷಯ ಫುಡ್ಸ್ ಪುಂಜಾಲಕಟ್ಟೆ ಇದರ ಮಾಲಕರಾದ ಶ್ರೀಮತಿ ಜಿ.ವಿ. ವೇದಾವತಿ ಮತ್ತು ವಾಸುದೇವ ಗೌಡ ಗುಂಡ್ಯ ಇವರು ಮಡಂತ್ಯಾರು ರೋಟರಿ ಕ್ಲಬ್ ಮುಖಾಂತರ ಏಪ್ರಿಲ್ 18ರಂದು ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದರು.














ಮೂಲತಃ ತೊಡಿಕಾನದ ಬಾಳೆಕಜೆ ನಾಗಪ್ಪ ಗೌಡರ ಪುತ್ರಿ ಜಿ.ವಿ. ವೇದಾವತಿ ಪುಂಜಾಲಕಟ್ಟೆಯ ಅಕ್ಷಯ ಫುಡ್ಸ್ ನ ಮಾಲಕರಾಗಿದ್ದು , ಅವರ ಪತಿ ಜಿ ವಾಸುದೇವ ಗೌಡರವರು ಮಡಂತ್ಯಾರು ರೋಟರಿ ಕ್ಲಬ್ ನ ಕಾರ್ಯದರ್ಶಿಯಾಗಿದ್ದಾರೆ. ಸುಮಾರು 8 ಸಾವಿರ ರೂಪಾಯಿ ಮೌಲ್ಯದ ಮೇಜು ಮತ್ತು ಕುರ್ಚಿಗಳನ್ನು ಅಂಗನವಾಡಿ ಶಾಲಾ ಮಕ್ಕಳ ಉಪಯೋಗಕ್ಕಾಗಿ ದಂಪತಿಗಳು ಮಡಂತ್ಯಾರು ರೋಟರಿ ಕ್ಲಬ್ ನ ಮುಖಾಂತರ ಅಂಗನವಾಡಿ ಶಾಲೆಯ ಶಿಕ್ಷಕರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಅಕ್ಷಯ ಫುಡ್ಸ್ ನ ಮಾಲಕರಾದ ಜಿ.ವಿ. ವೇದಾವತಿಯವರನ್ನು ಅಂಗನವಾಡಿಯ ವತಿಯಿಂದ ಗೌರವಿಸಲಾಯಿತು. ಮಡಂತ್ಯಾರು ರೋಟರಿ ಕ್ಲಬ್ ನ ಕಾರ್ಯದರ್ಶಿ ಜಿ ವಾಸುದೇವ ಗೌಡರವರು ರೋಟರಿಯ ಸಾಮಾಜಿಕ ಕಾರ್ಯಗಳ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಭವಾನಿ ಚಿಟ್ಟನೂರು, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ವಾಸವಿ, ಅಂಗನವಾಡಿ ಮೇಲ್ವಿಚಾರಕಿ ದೀಪಿಕಾ, ನಾಗಪ್ಪ ಗೌಡ ಬಾಳೆಕಜೆ ವೇದಿಕೆಯಲ್ಲಿದ್ದರು. ಜಿ.ವಿ ವೇದಾವತಿಯವರ ಸಹೋದರರು ಮತ್ತು ಮನೆಯವರು, ಅಂಗನವಾಡಿ ಶಾಲಾ ಮಕ್ಕಳ ಪೋಷಕರು, ಊರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂಗನವಾಡಿ ಮೇಲ್ವಿಚಾರಕಿ ದೀಪಿಕಾ ಪೋಷಣ್ ಪಕ್ವ ದ ಕುರಿತು ಮಾಹಿತಿ ನೀಡಿದರು. ಅಂಗನವಾಡಿ ಶಿಕ್ಷಕಿ ಹೇಮಾವತಿ ಮೆತಡ್ಕ ಸ್ವಾಗತಿಸಿದರು. ಕು. ಸುಷ್ಮಾ ಮೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸಹಾಯಕಿ ಸೀತಾ ಕಳ್ಳಂಬಳ ಸಹಕರಿಸಿದರು.







