ಗುತ್ತಿಗಾರು ಬಳಿ ರಾರಾಜಿಸುತ್ತಿದೆ ಬ್ಯಾನರ್














“ಎಲೆಕ್ಷನ್ ಮತ್ತು ಕಲೆಕ್ಷನ್ ನವರಿಗೆ ಕಡ್ಡಾಯವಾಗಿ ಒಳಗೆ ಪ್ರವೇಶವಿಲ್ಲ
ಕಚ್ಚುವ ನಾಯಿಗಳಿವೆ ಜಾಗ್ರತೆ” ಹೀಗೆ ಬರೆದಿರುವ ಬ್ಯಾನರ್ ಗುತ್ತಿಗಾರಿನ ಚತ್ರಪ್ಪಾಡಿ ಸಮೀಪ ದೇವಸ್ಯ ಎಂಬಲ್ಲಿ ಇಂತಹ ಬ್ಯಾನರ್ ಕಳೆದ ಹಲವು ತಿಂಗಳಿನಿಂದ ರಾರಾಜಿಸುತ್ತಿದೆ. ಲಕ್ಷ್ಮಣ ದೇವಸ್ಯ ಎಂಬವರು ತಮ್ಮ ಮನೆ ಬಳಿ ಇಂತಹ ಬರಹವಿರುವ ಬ್ಯಾನರ್ ರಸ್ತೆ ಬದಿ ಅಳವಡಿಸಿದ್ದಾರೆ. ಬಾಂಗ್ಲಾ ವಲಸಿಗರು ಅಕ್ರಮವಾಗಿ ಊರು ಊರಲ್ಲಿ ನೆಲೆಸುತಿದ್ದು ಅವರನ್ನು ಪತ್ತೆ ಹಚ್ಚ ಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮಣ ಅವರು ಪಂಚಾಯತ್ ಮತ್ತು ಜನಪ್ರತಿನಿಧಿಗಳ ಬಳಿ ಕೇಳಿಕೊಂಡಿದ್ದರು. ಇದಕ್ಕೆ ಸೂಕ್ತ ಸ್ಪಂದನೆ ದೊರೆಯದ ಕಾರಣ ಈ ರೀತಿಯ ಬ್ಯಾನರ್ ಅಳವಡಿಸಿಬೇಕಾಯ್ತು ಎಂದವರು ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.









