ಅಪ್ಪಯ್ಯ ಸೂಂತೋಡು‌ ನಿಧನ

0

ಉಬರಡ್ಕ‌ ಮಿತ್ತೂರು ಗ್ರಾಮದ ಸೂಂತೋಡು ನಿವಾಸಿ ಅಪ್ಪಯ್ಯ ಸೂಂತೋಡುರವರು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು.

ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು ಊರಿನ ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಉಬರಡ್ಕ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಪುತ್ರಿಯರಾದ ಅನನ್ಯ ಹಾಗೂ ಅನ್ವಿತಾರನ್ನು ಅಗಲಿದ್ದಾರೆ.