













ಮಂಡೆಕೋಲು ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಾವಂಜಿ ಕುಟುಂಬದ ಹಿರಿಯರಾದ ಎಂ. ತ್ಯಾoಪಣ್ಣ ಗೌಡರು ಎ.18ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಎಂ.ಟಿ. ಗೌಡರೆಂದೆ ಖ್ಯಾತರಾಗಿದ್ದ ಎಂ. ತ್ಯಾoಪಣ್ಣ ಗೌಡರು ಮಂಡೆ ಕೋಲು ಸಹಕಾರಿ ವ್ಯವಸಾಯ ಬ್ಯಾಂಕ್ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ 34ವರ್ಷಗಳ ಸೇವೆ ಸಲ್ಲಿಸಿ 1994ರಲ್ಲಿ ನಿವೃತ್ತರಾಗಿದ್ದರು. ಸಹಕಾರಿ ತತ್ತ್ವದಲ್ಲಿ ಅತ್ಯುತ್ತಮ ಕೃಷಿಕಾರಾಗಿ ಮತ್ತು ತಮ್ಮ ಪರಿಸರದ ಕ್ರಷಿಕರಿಗೆ ಮಾದರಿಯಾಗಿ ಮನ್ನಣೆಗೆ ಪಾತ್ರರಾಗಿದ್ದರು.
ಮೃತರು ಪತ್ನಿ ಚಂದ್ರಾವತಿ, ಪುತ್ರಿಯರಾದ ಶ್ರೀಮತಿ ಸರೋಜ ಪೂವಪ್ಪ ಕಣಿಯೂರು, ಶ್ರೀಮತಿ ಮಾಲತಿ ಪ್ರಭಾಕರ ದಂಬೆತೋಟ, ಶ್ರೀಮತಿ ವಾಣಿ ಉಮೇಶ್ ಕೊಚ್ಚಿ, ಶ್ರೀಮತಿ ವೀಣಾ ಸತೀಶ್ ಕೊಯಿಂಗಾಜೆ, ಪುತ್ರ ಶಿವಪ್ರಸಾದ್ ಎಂ.ಟಿ., ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ







