ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ವಜ್ರಖಚಿತ ಚಿನ್ನದ ಸರ ಸಮರ್ಪಣೆ

0

ಹೈದರಾಬಾದ್ ಉದ್ಯಮಿಯ ಸೇವೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಹೈದರಬಾದ್‌ನ ಉದ್ಯಮಿ ರಾಸನ್‌ ಗ್ರೂಪ್‌ನ ಚೇರ್‌ಮೆನ್‌ ಕಣ್ನಕರ್ ರವೀಂದ್ರ ರೆಡ್ಡಿ ಅವರು ವಜ್ರಖಚಿತ ಚಿನ್ನದ ಸರವನ್ನು ಎ. 22 ರಂದು ಸಮರ್ಪಿಸಿದರು.

ಸುಮಾರು ರೂ.12 ಲಕ್ಷ 44 ಸಾವಿರ ಮೌಲ್ಯದ ಸರವನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್. ಎಸ್.ಇಂಜಾಡಿ ಅವರಿಗೆ ಆಡಳಿತ ಕಚೇರಿಯಲ್ಲಿ ಹಸ್ತಾಂತರಿಸಿದರು.


ಶ್ರೀ ದೇವಳದಲ್ಲಿ ಅರ್ಚಕರಾದ ರಾಜೇಶ್‌ ನಡ್ಯಂತಿಲ್ಲಾಯ ಮತ್ತು ಸತ್ಯನಾರಾಯಣ ನೂರಿತ್ತಾಯರು ವಿವಿಧ ವೈದಿಕ ವಿದಾನಗಳನ್ನು ನೆರವೇರಿಸಿ ಚಿನ್ನದ ಸರವನ್ನು ಶ್ರೀ ದೇವರಿಗೆ ಸಮರ್ಪಿಸಿದರು.ನಂತರ ಅರ್ಚಕರು ಸೇವಾರ್ಥಿಗಳಿಗೆ ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್‌ ಇಂಜಾಡಿ ಅವರು ಸೇವಾರ್ಥಿ ಕಣ್ನಕರ್ ರವೀಂದ್ರ ರೆಡ್ಡಿ ಅವರನ್ನು ಗೌರವಿಸಿದರು. ರವೀಂದ್ರ ರೆಡ್ಡಿ ಅವರ ಪುತ್ರ ಕಣ್ನಕರ್ ಸಂದೀಪ್‌ ರೆಡ್ಡಿ , ಸಂಬಂಧಿಕರಾದ ಉತ್ತಮ್‌ ಕುಮಾರ್‌ ರೆಡ್ಡಿ, ರಜಿನಿ, ಹೈಮಾ, ಹೈದರಬಾದ್‌ನ ಉದ್ಯಮಿ ಮಾರಕಟ್ಟೆಯ ಕೃಷ್ಣಮೂರ್ತಿ ಮಂಜ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್‌ ನೆಕ್ರಾಜೆ, ಎಇಒ ಯೇಸುರಾಜ್ , ಶಿಷ್ಠಾಚಾರ ವಿಭಾಗದ ಪ್ರಮೋದ್‌ ಕುಮಾರ್.ಎಸ್‌,‌ ಸೇವಾರ್ಥಿಗಳ ಆತ್ಮೀಯರಾದ ದೇವಳದ ಕೃಷ್ಣಪ್ರಸಾದ್‌ ಕೆ.ಜಿ.ಭಟ್, ದೇವಳದ ಸಿಬ್ಬಂದಿ ಸದಾನಂದ ಕಾರ್ಜ ಮತ್ತಿತರರು ಉಪಸ್ಥಿತರಿದ್ದರು.