ನಮ್ಮನ್ನು ನಾವು ನೋಡಿಕೊಳ್ಳುವುದೇ ಸ್ವರೂಪ : ಡಾ.ಯು.ಪಿ. ಶಿವಾನಂದ
ಬದುಕನ್ನು ಪ್ರೀತಿಸುವುದು ನಮ್ಮ ಮೊದಲ ಆದ್ಯತೆ. ಮನುಷ್ಯ ಹೆಚ್ಚು ನೋಡುವುದು ತನ್ನನ್ನೇ. ನಮ್ಮನ್ನು ನಾವು ನೋಡಿಕೊಳ್ಳುವುದೇ ಸ್ವರೂಪ. ಸ್ವರೂಪದ ಅನುಭವ ನಿಮ್ಮದೇ ಅನುಭವ. ಹಾಗಾಗಿ ಇಲ್ಲಿ ಕಲಿತ ಮಕ್ಕಳು ಶ್ರೇಷ್ಠರಾಗುತ್ತಾರೆ ಎಂದು
ಎಂದು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಹೇಳಿದರು.















ಪೆರ್ನಾಜೆ ಸೀತಾ ರಾಘವ ಪ್ರೌಢಶಾಲೆಯಲ್ಲಿ ಆದಿ ಸ್ವರೂಪ ಶಿಕ್ಷಣ ಕೇಂದ್ರದ ಆಶ್ರಯದಲ್ಲಿ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವಿಟ್ಲ ಇದರ ಸಹಯೋಗದಲ್ಲಿ ನಡೆದ ಸಂಪೂರ್ಣ ಮೆಮೊರಿ ಎಂಬಿಎ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
” ನಿಮ್ಮನ್ನು ನೀವು ಗುರುತಿಸುವುದರೊಂದಿಗೆ ಸಮಾಜದ ಇತರರನ್ನೂ ಗುರುತಿಸುವ ಕಾರ್ಯ ಮಾಡಿ ಎಂದವರು ಕರೆ ನೀಡಿದರು.
ಆದಿ ಸ್ವರೂಪ ಶಿಕ್ಷಣ ಸಾಧನಾ ಕೇಂದ್ರದ ಸ್ಥಾಪಕ ಗೋಪಾಡ್ಕರ್ ಅವರು ಸ್ವಾಗತಿಸಿ ಪ್ರಸ್ತಾವನೆಗೈದು ಪೆರ್ನಾಜೆಯಲ್ಲಿ ಆರಂಭಗೊಳ್ಳಲಿರುವ ಸ್ವರೂಪ ಪದ್ಧತಿಯ ಶಿಕ್ಷಣ ಸಂಸ್ಥೆಯ ಮಾಹಿತಿ ನೀಡಿದರು.
ಸ್ವರೂಪದ ಹಿರಿಯ ವಿದ್ಯಾರ್ಥಿಗಳಾದ ಚೇತನ್, ರೆಹಮಾನ್, ಅಕ್ಷತಾ ಮಾತನಾಡಿದರು.
ಶಿಬಿರದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಅಭಿನವ್ ರಾಜ್ ಮತ್ತು ಅಭಿನವ್ ಎಸ್. ಭಟ್ ಅವರಿಗೆ ಪ್ರಶಂಸನಾ ಪತ್ರ ಮತ್ತು ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಆದಿ ಸ್ವರೂಪ ಶಿಕ್ಷಣ ಸಾಧನಾ ಕೇಂದ್ರದ ಶಿಕ್ಷಕರಾದ ಉಮೇಶ್ ಕೊಂಪುಳಿ , ಶೋಭಾ ಕಲ್ಲಾಜೆ, ಪೋಷಕರಾದ ಪ್ರಜ್ಞಾ ಎಸ್.ಎನ್. , ಸ್ವರೂಪ ಅಧ್ಯಯನ ಕೇಂದ್ರದ ಸುಂಮಗಲಾ ಅಡ್ಕಾರ್ , ಆದಿ ಸ್ವರೂಪ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಬಳಿಕ ಶಿಬಿರಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.







