ಇಂದು (ಎ. 26)ಬೆಳಿಗ್ಗೆ 11:30 ರಿಂದ ಭಕ್ತಿ ಭಾವ ಗಾನ ಸಂಭ್ರಮ
ಸಂಜೆ ಝೀ ಕನ್ನಡ ಸರಿಗಮಪ ಖ್ಯಾತಿಯ ಜ್ಞಾನ ಗುರುರಾಜ್ ಇವರಿಂದ ಜ್ಞಾನ-ಗಾನ,ಸಾಂಸ್ಕೃತಿಕ ವೈವಿಧ್ಯ, ಗಾನ ವೈಭವ
ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಆಶೀರ್ವಚನ















ಶ್ರೀ ಮಹಾವಿಷ್ಣು ದೇವಳ ನಿಡ್ವಾಳ ಕರಿಕಳ, ಐವತ್ತೊಕ್ಲು-ಎಣ್ಮೂರು ಇದರ ಪುನರ್ ನಿರ್ಮಾಣ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಎಪ್ರಿಲ್ 24 ರಿಂದ ಮೇ.3 ರ ತನಕ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಪ್ರತಿದಿನ ಮುಂಜಾನೆಯಿಂದ ರಾತ್ರಿ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ
ಸಾಂಸ್ಕೃತಿಕ ಕಾರ್ಯಕ್ರಮ:ಇಂದು ಎ.26 ರಂದು ಬೆಳಿಗ್ಗೆೆ 11.30ರಿಂದ ಉಪ್ಪಿನಂಗಡಿ ಸುಸ್ವರ ಮೆಲೋಡಿಸ್ ಪ್ರಸ್ತುತಿಯ ಬಿ.ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು ಸಾರಥ್ಯದಲ್ಲಿ ಶ್ರೀಮತಿ ವೈಶಾಲಿ ಎಂ. ಕುಂದರ್. ನಿರ್ದೇಶನದ ಭಕ್ತಿ-ಭಾವ ಗಾನ ಸಂಭ್ರಮ ನಡೆಯಲಿದೆ. ಸಂಜೆ 6 ರಿಂದ ಸಂಸ್ಕಾರ ಅಂಗವನಾಡಿ ಕೇಂದ್ರ ಕಲ್ಮಡ್ಕ ಹಾಗೂ ತಾಳ ನಿನಾದಂ ಭಜನಾ ತಂಡ ಪಡ್ಪಿನಂಗಡಿ ಇವರಿಂದ ‘ಸಾಂಸ್ಕೃತಿಕ ವೈವಿಧ್ಯ’, ಕು ಸಾನ್ವಿ ದೊಡ್ಡಮನೆ ಇವರಿಂದ ಯೋಗ ಪ್ರದರ್ಶನ, ರಾತ್ರಿ 9.30ರಿಂದ ಶ್ರುತಿ ಸಾಗರ್ ಬ್ರಹ್ಮಾವರ ಉಡುಪಿ ತಂಡದವರಿಂದ ಗಾನ ವೈಭವ ನಡೆಯಲಿದೆ.
ಸಭಾ ಕಾರ್ಯಕ್ರಮ:
ರಾತ್ರಿ ಗಂಟೆ 7 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ.ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠ ಪರಮ ಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪುತ್ತೂರು ಭಾರತ್ ಟ್ರೇಡರ್ಸ್ ಕುಶಾಲಪ್ಪ ಮೇಲ್ಪಾಡಿ ಸಭಾದ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಬಹುವಚನಂ ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಡಾ. ಶ್ರೀಶಕುಮಾರ ಎಂ.ಕೆ. ಧಾರ್ಮಿಕ ಉಪನ್ಯಾನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಧರ್ಮಸ್ಥಳ ಮಾಜಿ ಮುತ್ಸದ್ದಿ ಜಮಾ ಉಗ್ರಾಣದ ಭುಜಬಲಿ ಧರ್ಮಸ್ಥಳ, ಸುಳ್ಯ ಅಕಾಡಮಿ ಆಫ್ ಲಿಬರಲ್ ಎಜುಕೇಶನ್(ರಿ) ಜನರಲ್ ಸೆಕ್ರೆಟರಿ ಅಕ್ಷಯ್ ಕೆ.ಸಿ ಕುರುಂಜಿ, ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ನಿ. ಗುತ್ತಿಗಾರು ಇದರ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಹಿರಿಯ ಸಹಕಾರಿ ಮಾಧವ ಗೌಡ ಜಾಕೆ, ಬೆಂಗಳೂರು ಉದ್ಯಮಿ ಲಕ್ಷ್ಮೀನಾರಾಯಣ ಐವರ್ನಾಡು, ಸುಬ್ರಹ್ಮಣ್ಯ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್(ರಿ.) ನ ಅಧ್ಯಕ್ಷ ಡಾ. ರವಿ ಕಕ್ಕೆಪದವು, ಮಂಗಳೂರು ಅರಣ್ಯ ಸಂಚಾರಿ ದಳ ವಲಯರಣ್ಯಾಧಿಕಾರಿ ಸಂತೋಷ್ ಕುಮಾರ್ ರೈ , ಪುತ್ತೂರು ಅಕ್ಷಯ ವಿದ್ಯಾಸಂಸ್ಥೆಗಳ ಸಂಚಾಲಕ ಜಯಂತ ನಡುಬೈಲು, ಮುರುಳ್ಯ-ಎಣ್ಣೂರು ಪ್ರಾಕೃ.ಪ.ಸ.ಸಂಘದ ಅಧ್ಯಕ್ಷ ವಸಂತ ನಡುಬೈಲು ,ಬೆಂಗಳೂರು ವಕೀಲರು ವಾಚಣ್ಣ ಗೌಡ ಕೇರ್ಪಡ ಪೂಜಾರಿಮನೆ ಪ್ರಗತಿಪರ ಕೃಷಿಕ ಕುಶಾಲಪ್ಪ ಗೌಡ ಬೈತಡ್ಕ ಪಾಲ್ಗೊಳ್ಳಲಿದ್ದಾರೆ. ವಸ್ತುರೂಪದ ದಾನಿಗಳಿಗೆ ಸನ್ಮಾನ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು:
ಬೆಳಿಗ್ಗೆ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಸ್ವಶಾಂತಿ, ಶ್ವಾನಶಾಂತಿ, ಅದ್ಭುತ ಶಾಂತಿ, ಚೋರಶಾಂತಿ, ಹೋಮಾದಿಗಳು. ಬಾಳಿಲ ಗೀತಾ ಜ್ಞಾನ ಯಜ್ಞ ಪಾರಾಯಣ ತಂಡದಿಂದ ಶ್ರೀಮದ್ಭಗವದ್ಗೀತಾ ಪಾರಾಯಣ. ಏನೆಕಲ್ಲು ಶ್ರೀ ಅಮೃತೇಶ್ವರಿ ಸ್ವಸಹಾಯ ಸಂಘದಿಂದ ಭಜನಾ ಸಂಕೀರ್ತನೆ. ಮಧ್ಯಾಹ್ನ 12.00 ರಿಂದ ಹೋಮಗಳ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಸಂಜೆ ಹೇಮಳ ಕೆಮ್ಮಲೆ ಶ್ರೀ ನಾಗಬ್ರಹ್ಮ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡುಗಲ್ಲು ಶ್ರೀದುರ್ಗಾ ಭಜನಾ ಮಂಡಳಿ ಮರಕತ ಇವರಿಂದ ಭಜನಾ ಸಂಕೀರ್ತನೆ, ಅಳ್ಪೆ ಚಿಂಗಾಣಿಗುಡ್ಡೆ ಶ್ರೀವಿಷ್ಟು ಮಹಿಳಾ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ ನಡೆಯಲಿದೆ. ಸಂಜೆ 05.30 ರಿಂದ ದೀಪಾರಾಧನೆ, ಅಂಕುರಪೂಜೆ, ಕುಂಭೇಶ ಕರ್ಕರಿ ಪೂಜೆ, ಅನುಜ್ಞಾಕಲಶ ಪೂಜೆ, ಪರಿಕಲಶಪೂಜೆ, ಅಧಿವಾಸಹೋಮ, ಕಲಶಾಧಿವಾಸ, ದುರ್ಗಾಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.







