ಗೂನಡ್ಕ: ತೆಕ್ಕಿಲ್ ಆಯಿಷಾ ನಿಧನ

0

ಸಂಪಾಜೆ ಗ್ರಾಮದ ಗೂನಡ್ಕ ನಿವಾಸಿ ದಿವಂಗತ ಅಹ್ಮದ್ ಅವರ ಪತ್ನಿ ತೆಕ್ಕಿಲ್ ಆಯಿಷಾ ದರ್ಕಾಸ್ (70 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಏಪ್ರಿಲ್ 25 ರಂದು ಸಂಜೆ ಗೂನಡ್ಕ ಮನೆಯಲ್ಲಿ ನಿಧನರಾದರು.

ಮೃತರು ಪುತ್ರರಾದ ಶಂಸುದ್ದೀನ್ ಗೂನಡ್ಕ, ಆರಿಫ್ ಗೂನಡ್ಕ, ಹಾಗೂ ಪುತ್ರಿಯರಾದ ಫಾತಿಮಾ ,ಅಪ್ಸತ್ ,ರಮ್ ಸೀನ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಅವರು ಸಂಪಾಜೆ ಗ್ರಾಮದ ಗೂನಡ್ಕ ದಿವಂಗತ ತೆಕ್ಕಿಲ್ ಮೊಹಿದ್ದೀನ್ ಕುಂಞಿ ಯವರ ಪುತ್ರಿಯಾಗಿದ್ದು ತೆಕ್ಕಿಲ್ ಮನೆತನದವರಾಗಿದ್ದಾರೆ.