













ಸುಳ್ಯದ ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಹಾಗೂ ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ನ ವಾರ್ಷಿಕೋತ್ಸವ ಎ. 29ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಒ.ಎಲ್.ಇ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ವಹಿಸಿ ಮಾತನಾಡಿ ನರ್ಸಿಂಗ್ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಮನಃಪೂರ್ವಕವಾಗಿ ಮಾಡುವ ಸೇವೆ. ರೋಗಿಗಳ ಆರೈಕೆ, ಸಹಾನುಭೂತಿ ಮತ್ತು ನಿಷ್ಠೆಯಿಂದ ಸೇವೆ ಮಾಡಿದಾಗ ನರ್ಸ್ಗಳ ಮಹತ್ವ ಹೆಚ್ಚಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿ ಕೆ.ವಿ.ಜಿ.ಎಂ.ಸಿ.ಎಚ್ ಡೀನ್ ಡಾ. ನೀಲಾಂಬಿಕೈ ನಟರಾಜನ್ ಭಾಗವಹಿಸಿ ಶುಭ ಹಾರೈಸಿದರು . ಗೌರವ ಅತಿಥಿಯಾಗಿ ಸುಳ್ಯ ಎನ್.ಎಂ.ಪಿ.ಯು.ಸಿ ಪ್ರಾಂಶುಪಾಲೆ ಪ್ರೊ. ಮಿಥಾಲಿ ಪಿ. ರೈ ಭಾಗವಹಿಸಿದ್ದರು. ವೇದಿಕೆಯಲ್ಲಿ ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಪ್ರಾಂಶುಪಾಲರಾ ಡಾ. ಪ್ರಮೋದ್ ಕೆ.ಜೆ, ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಪ್ರಾಂಶುಪಾಲೆ ಚಂದ್ರಾವತಿ ಕೆ.ಎಸ್, ಪ್ರೊಫೆಸರ್ ಮರಿಯಾ ಒಲಿವರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದೀಪಪ್ರಜ್ವಲನ ಹಾಗೂ ಫ್ಲಾರೆನ್ಸ್ ನೈಟಿಂಗೇಲ್ ಅವರಿಗೆ ಪುಷ್ಪ ನಮನ ನೆರವೇರಿತು. ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.

ಕೆವಿಜಿ ನರ್ಸಿಂಗ್ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರೊ. ಶಿಲ್ಪಾ ಎನ್.ಎಂ ಸ್ವಾಗತಿಸಿ, ಪ್ರೊಫೆಸರ್ ಮರಿಯಾ ಒಲಿವರ್ ವಂದಿಸಿದರು. ಡಾ. ಪ್ರಮೋದ್ ಕೆ.ಜೆ ವಾರ್ಷಿಕ ವರದಿ ವಾಚಿಸಿದರು. ಡಾ .ಚಂದ್ರಾವತಿ ಕೆ.ಎಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪನ್ಯಾಸಕರಾದ ಲವೀನಾ ಕೆ.ಎ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.








