













ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಿಜ್ಞಾನ ವಿಭಾಗ (ಪಿ.ಸಿ.ಎಂ.ಬಿ )ವಿದ್ಯಾರ್ಥಿನಿ ಅಭಿಜ್ಞಾ ಭಟ್ ಎಸ್. ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಾಗ 595 ಅಂಕ ಗಳಿಸಿದ್ದರು. ಹಿಂದಿಯಲ್ಲಿ 98 ಅಂಕ ಗಳಿಸಿದ್ದರು. ಹಿಂದಿ ವಿಷಯದ ಮರು ಮೌಲ್ಯ ಮಾಪನದಲ್ಲಿ ಒಂದು ಅಂಕ ಲಭಿಸಿ 99ಅಂಕಗಳೊಂದಿಗೆ ಒಟ್ಟು 596ಅಂಕ ಗಳಿಸಿದ್ದಾರೆ. ಪಿಸಿಎಂಬಿ ಯಲ್ಲಿ ಪೂರ್ಣ 100 ಅಂಕ ಗಳಿಸಿದ್ದಾರೆ. ಜೆ.ಇ.ಇ ಮೈನ್ಸ್ ಲ್ಲಿ 94.29 ಪರ್ಸಂಟೈಲ್ ಗಳಿಸಿದ್ದಾರೆ. ಈ ಸಾಧಕಿ ಸುಳ್ಯದ ಪ್ರಸಿದ್ಧ ವೈದ್ಯ, ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು &ಆಸ್ಪತ್ರೆಯ ಪ್ರೊಫೆಸರ್ ಡಾ. ರವಿಶಂಕರ್ ಭಟ್ ಸಂಕಹಿತ್ಲು ಮತ್ತು ಅನುಪಮ ಐ ದಂಪತಿ ಪುತ್ರಿ.







