ಕಳೆದ ಮೂವತ್ತೊಂಬತ್ತು ವರ್ಷಗಳಿಂದ ಸುಳ್ಯ ನಗರ ಪಂಚಾಯತ್ ಸೇರಿ ವಿವಿಧ ಸ್ಥಳಗಳಲ್ಲಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸುಳ್ಯ ನಗರ ಪಂಚಾಯತ್ ನಲ್ಲಿ ಬಿಲ್ ಕಲೆಕ್ಟರಾಗಿರುವ ಕೆ ಧನಂಜಯ ಎ.30 ರಂದು ಸೇವೆಯಿಂದ ನಿವೃತ್ತಿ ಹೊಂದಿದರು.














1984 -85 ರಲ್ಲಿ ಸುಳ್ಯದ ಒಡಬಾಯಿ ಯಲ್ಲಿ ಕಾಂಪ್ಕೋ ಕ್ಯಾಡ್ ಬರೀಸ್ ನಲ್ಲಿ ಒಂದು ವರ್ಷ ಖಾಸಗಿ ಸೇವೆ ಸಲ್ಲಿಸಿ 1986 ರಿಂದ ಒಂದೂವರೆ ತನಕ ಕರ್ನಾಟಕ ಮೀನುಗಾರಿಕೆ ಇಲಾಖೆಯಲ್ಲಿ ದಿನಗೂಲಿ ನೆಲೆಯಲ್ಲಿ ತಾತ್ಕಾಲಿಕ ಉದ್ಯೋಗ ಮಾಡಿದರು.
1987 ರಲ್ಲಿ ಸುಳ್ಯ ಮಂಡಲ ಪಂಚಾಯತ್ ನಲ್ಲಿ ವೃತ್ತಿ ನಳ್ಳಿನೀರು ಸಹಾಯಕರಾಗಿ ದಿನಗೂಲಿ ನೆಲೆಯಲ್ಲಿ ಉದ್ಯೋಗಕ್ಕೆ ಸೇರಿದರು.
ನಿರಂತರ ಮೂವತ್ತೊಂಬತ್ತು ವರ್ಷದ ನಳ್ಳಿನೀರು ಸರಬರಾಜು ವಿಭಾಗದಲ್ಲಿ ಸೇವೆಸಲ್ಲಿಸಿ ಎ.30 ರಂದು ನಿವೃತ್ತಿ ಹೊಂದಿದರು.
ಇವರು ವಿಶೇಷವಾಗಿ ಸುಳ್ಯ ನಗರ ಪಂಚಾಯತ್ ನೀರು ಸರಬರಾಜು ಕೆಲಸದಲ್ಲಿ ಪ್ರತಿಯೊಂದು ಕೆಲಸಗಳ ಬಗ್ಗೆ ಅಪಾರ ಅನುಭವ ಮತ್ತು ಜ್ಞಾನ ಹೊಂದಿದ್ದಾರೆ.
ಇವರ ಪತ್ನಿ ವಾರಿಜಾ ನಿವೃತ್ತ ಶಿಕ್ಷಕಿ ಆರ್ ಪಿ ಪುತ್ರ ಸ್ವಸ್ತಿಕ್ ಪುತ್ರಿ ಸ್ವಪ್ನ ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾರೆ.







