ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಬಹುಮತ ಪಡೆಯುತಿದ್ದಂತೆ ಸುಳ್ಯ ಬಿಜೆಪಿ ಮಂಡಲ ಸಮಿತಿ ವತಿಯಿಂದ ವಿಜಯೋತ್ಸವ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಎದುರುಗಡೆ ನಡೆಯಿತು.














ವಿಜಯೋತ್ಸವ ದಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯರವರು, “ಪಂಚ ರಾಜ್ಯದಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಮತ ನೀಡಿದ ಮತದಾರರು ಮತ್ತೆ ಮೋದಿಯವರಿಗೆ ಬೆಂಬಲ ನೀಡಿದ್ದಾರೆ. ಯಾರಿಗೆಮತ ನೀಡಿದರೆ ಒಳ್ಳೆಯದು ಎಂದು ಅರಿತ ಮತದಾರ ಬಿಜೆಪಿಯನ್ನು ಗೆಲ್ಲಿಸಿದ್ದಾರೆ” ಎಂದರು.
ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, “ಪಶ್ಚಿಮ ಬಂಗಾಳದ ಗೆಲುವು ಹಿಂದುತ್ವದ ಗೆಲುವು” ಎಂದರು.
ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, “ನರೇಂದ್ರ ಮೋದಿಯವರ ಅಧಿಕಾರವನ್ನು ನೋಡಿದ ಜನರು ಪಶ್ಚಿಮ ಬಂಗಾಲದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಈ ಗೆಲುವು ದೇಶಕ್ಕೆ ದಿಕ್ಸೂಚಿ. ಮುಂದಿನ ದಿನದಲ್ಲಿ ಕೇರಳದಲ್ಲಿಯೂ ಬಿಜೆಪಿ ಅಧಿಕಾರ ಹಿಡಿಯಲಿದೆ” ಎಂದು ಹೇಳಿದರು.
ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ.ಕೆ., ಪ್ರಮುಖರಾದ ಪ್ರದೀಪ್ ರೈ ಮನವಳಿಕೆ, ರಾಕೇಶ್ ರೈ ಕೆಡೆಂಜಿ, ಸುಭೋದ್ ಶೆಟ್ಟಿ ಮೇನಾಲ, ರಾಜೇಶ್ ಶೆಟ್ಟಿ ಮೇನಾಲ, ವಿಕ್ರಂ ಅಡ್ಪಂಗಾಯ, ಅವಿನಾಶ್ ಕುರುಂಜಿ, ಜಗನ್ನಾಥ ಜಯನಗರ, ಸೋಮನಾಥ ಪೂಜಾರಿ, ಸುನಿಲ್ ಕೇರ್ಪಳ, ವಿಜಯ ಆಲಡ್ಕ, ಬೂಡು ರಾಧಾಕೃಷ್ಣ ರೈ, ಕೃಷ್ಣ ಎಂ.ಆರ್. ಕಡಬ, ಕೃಷ್ಣಯ್ಯ ಮೂಲೆತೋಟ, ನಾರಾಯಣ ಶಾಂತಿನಗರ, ದಾಮೋದರ ಮಂಚಿ, ಅಶೋಕ್ ಅಡ್ಕಾರು, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಶಶಿಕಲಾ ನೀರಬಿದಿರೆ, ಪುಷ್ಪಾ ಮೇದಪ್ಪ, ಜಗದೀಶ್ ಸರಳಿಕುಂಜ, ಪ್ರಣೀತ್ ಕಣಕ್ಕೂರು, ವಿಜಯ ಕುಮಾರ್ ಕುರುಂಜಿಗುಡ್ಡೆ, ಚಂದ್ರಶೇಖರ ನೆಡಿಲು,ದಿವ್ಯಾ ಮಡಪ್ಪಾಡಿ, ಬಾಲಚಂದ್ರ ಕೂಟೇಲು, ಹರಿಣಾಕ್ಷಿ ನಾರಾಯಣ, ಶಿವರಾಮ ಕೇರ್ಪಳ, ಸುರೇಶ್ ನಾಯಕ್‌ಜಯನಗರ, ಚನಿಯ ಕಲ್ತಡ್ಕ, ಗಂಗಾಧರ್ ಸವಣೂರು, ಜಗದೀಶ ಸರಳಿಕುಂಜ ಮೊದಲಾದವರಿದ್ದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಕಾರ್ಯಕ್ರಮ ನಿರ್ವಹಿಸಿದರು.







