ಓಡಬಾಯಿ :ಟೂರಿಸ್ಟ್ ಬಸ್ಸಿನಿಂದ ಐಸ್ ಕ್ರೀಮ್ ಕಪ್ ಮತ್ತು ನೀರಿನ ಖಾಲಿ ಬಾಟಲಿ ಕಾರಿಗೆ ಎಸೆದ ಬಗ್ಗೆ ಮಾತಿನ ಚಕಮಕಿ

0

ಬಸ್ಸನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದ ಕಾರು ಚಾಲಕ, ಮಾತುಕತೆ ಮೂಲಕ ಸುಖಾಂತ್ಯ

ಕಾಸರಗೋಡಿನಿಂದ ಸುಳ್ಳಕ್ಕೆ ಮದುವೆ ಸಮಾರಂಭಕ್ಕೆ ಬಂದಿದ್ದ ಟೂರಿಸ್ಟ್ ಬಸ್ಸು ಹಿಂತಿರುಗಿ ಹೋಗುತ್ತಿದ್ದ ಸಂದರ್ಭ ಬಸ್ಸಿನಲ್ಲಿದ್ದ ಮಕ್ಕಳು ಐಸ್ ಕ್ರೀಮ್ ಸೇವಿಸಿ ಅದರ ಕಪ್ ಮತ್ತು ನೀರಿನ ಖಾಲಿ ಬಾಟಲಿ ರಸ್ತೆಗೆ ಎಸೆದಿದ್ದು ಈ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಹೋಗುತ್ತಿದ್ದ ಕಾರಿನ ಮೇಲೆ ಈ ವಸ್ತುಗಳು ಬಿದ್ದಿದ್ದು ಇದರಿಂದ ಆಕ್ರೋಶಗೊಂಡ ಕಾರು ಚಾಲಕ ಬಸ್ಸನ್ನು ಹಿಂಬಾಲಿಸಿ ಒಡಬಾಯಿ ಬಳಿ ಬಸ್ಸನ್ನು ನಿಲ್ಲಿಸಿ ಚಾಲಕನೊಂದಿಗೆ ಮಾತಿನ ಚಕಾಮುಕಿ ನಡೆಸಿದ ಘಟನೆ ಮೇ 4 ರಂದು ಸಂಜೆ ವರದಿಯಾಗಿದೆ.

ಘಟನೆಯಲ್ಲಿ ಕಾರು ಚಾಲಕ ಬಸ್ಸಿನ ಚಾಲಕನನ್ನು ಪ್ರಶ್ನಿಸುತ್ತಿದ್ದ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಂದು ಕಾರು ಚಾಲಕನ ಮೇಲೆ ಗಲಾಟೆ ಮಾಡಲು ಆರಂಭಿಸಿದರು ಎನ್ನಲಾಗಿದ್ದು ಈ ವೇಳೆ ಇದೇ ರಸ್ತೆಯಲ್ಲಿ ಬಂದ ರಂಜಿತ್ ಪೂಜಾರಿ ಯವರು ಮಧ್ಯ ಪ್ರವೇಶಿಸಿ ಎರಡೂ ತಂಡದವರನ್ನು ಸಮಾಧಾನಪಡಿಸಿ ಕಳುಹಿಸಿದರು ಎಂದು ತಿಳಿದು ಬಂದಿದೆ.