ಮೇ 08: ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಾಜ್ಯುವೇಶನ್ ಡೇ ಮತ್ತು ಕಲಾಕಾರ್ 2026 ವಾರ್ಷಿಕೋತ್ಸವ

0

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನಲ್ಲಿ ಅಂತಿಮ ವರ್ಷದ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಪ್ರಧಾನ ಕಾರ್ಯಕ್ರಮವನ್ನು ಮೇ 08 ರಂದು ನಡೆಸಲಾಗುವುದು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರೇಣುಕಾಪ್ರಸಾದ್ ಕೆ.ವಿ, ಚೇರ್‌ಮೆನ್ ಎ.ಒ.ಎಲ್.ಇ.(ರಿ) ಕಮಿಟಿ ?ಬಿ?, ಸುಳ್ಯ ಇವರು ವಹಿಸಲಿದ್ದಾರೆ. ಡಾ. ಜ್ಯೋತಿ ಆರ್. ಪ್ರಸಾದ್, ಕಾರ್ಯದರ್ಶಿ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಕಮಿಟಿ ?ಬಿ? ಇವರು ಉಪಸ್ಥಿತಲಿರುವರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿಟ್ಟೆ (ಡೀಮ್ಡ್ ಯುನಿವರ್ಸಿಟಿ)ಯ ಉಪಕುಲಪತಿಗಳಾದ ಡಾ. ಎಂ.ಎಸ್. ಮೂಡಿತ್ತಾಯ ಇವರು ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸುತ್ತಿರುವ 384 ವಿದ್ಯಾರ್ಥಿಗಳು ಪದವಿ ಪತ್ರವನ್ನು ಸ್ವೀಕರಿಸಲಿದ್ದಾರೆ ಅಲ್ಲದೆ ಈ ಬಾರಿಯ ಎಂ.ಟೆಕ್ ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳು ಮತ್ತು ಡಾಕ್ಟರೇಟ್ ಪದವಿ ಸ್ವೀಕರಿಸಿದ ಪ್ರೊಫೆಸರ್ ಅನ್ನು ಸನ್ಮಾನಿಸಲಾಗುವುದು.
ಅದೇ ದಿನ ಸಂಜೆ ಡಾ. ದಾಮೋದರ ನಾರಾಲು, ವಿಶೇಷ ಅಧಿಕಾರಿ, ವಿ.ಟಿ.ಯು. ಮಂಗಳೂರು ವಿಭಾಗ ಇವರು ಕಾಲೇಜಿನ ವಾರ್ಷಿಕೋತ್ಸವ ?ಕಲಾಕಾರ್ 2026? ಇದರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ತದನಂತರ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್ ಸುಳ್ಯ ಇದರ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ., ಉಪಪ್ರಾಂಶುಪಾಲ ಡಾ. ಶ್ರೀಧರ್ ಕೆ. ಇವರ ಉಪಸ್ಥಿತಿಯಲ್ಲಿ ತಿಳಿಸಿರುತ್ತಾರೆ.