ಸುಳ್ಯದಲ್ಲಿ ವಾಲಿಬಾಲ್ ತರಬೇತಿ ಶಿಬಿರ ಉದ್ಘಾಟನೆ

0

ಸ್ಪೋರ್ಟ್ಸ್ ಕಲ್ಚರ್ ಕ್ರೀಡಾಪಟುವಿಗೆ ಮುಖ್ಯ : ಜೆ.ಪಿ.ರೈ

ಕ್ರೀಡೆಯಲ್ಲಿ ವಿ.ಐ.ಪಿ. ಎಂಬುದು ಇಲ್ಲ : ಇಬ್ರಾಹಿಂ ಗೂನಡ್ಕ

ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನೇತೃತ್ವದಲ್ಲಿ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಹಕಾರದಲ್ಲಿ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ಒಂದು ವಾರಗಳ ಕಾಲ ನಡೆಯುವ ವಾಲಿಬಾಲ್ ತರಬೇತಿ ಶಿಬಿರದ ಉದ್ಘಾಟನೆ ಮೇ.5ರಂದು ಸಂಜೆ ನಡೆಯಿತು.

ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಕೋಶಾಧಿಕಾರಿ ಇಬ್ರಾಹಿಂ ಗೂನಡ್ಕ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಆಟ ಯಾವುದೇ ಇರಲಿ ಶಿಸ್ತು ಮತ್ತು ಶ್ರದ್ಧೆ ಇದ್ದಾಗ ಆತ ಯಶಸ್ವಿ ಕ್ರೀಡಾ ಪಟು ಆಗುತ್ತಾನೆ. ಕ್ರೀಡೆಯಲ್ಲಿ ಮಾತ್ರ ವಿ.ಐ.ಪಿ. ಎನ್ನುವುದು ಇಲ್ಲ. ಇಲ್ಲಿ ಎಲ್ಲರೂ ಸಮಾನರು” ಎಂದು ಹೇಳಿದರು.

ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಎನ್.ಜಯಪ್ರಕಾಶ್ ರೈ ಮಾತನಾಡಿ, “ವಿದ್ಯಾರ್ಥಿಗಳು ವಾಲಿಬಾಲ್ ತರಬೇತಿಯ ಜತೆಗೆ ಸ್ಪೋರ್ಟ್ಸ್ ‌ಕಲ್ಚರ್ ತಿಳಿದುಕೊಳ್ಳಬೇಕು. ಆಗ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ಗುರುತಿಸಿಕೊಳ್ಳುತ್ತೀರಿ” ಎಂದರು.

ಸುಳ್ಯ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆ ವಹಿಸಿದ್ದರು.

ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಡಾ.ಪ್ರಶಾಂತ್ ವೈದ್ಯರ್ ಸುಳ್ಯ ಶುಭಹಾರೈಸಿದರು.

ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಮಾಜಿ ಉಪಾಧ್ಯಕ್ಷ ಕೆ.ಗೋಕುಲ್ ದಾಸ್, ಸುಳ್ಯ ಯುವಜನ ಸೇವಾ ಸಂಸ್ಥೆ ಅಧ್ಯಕ್ಷ ದೀಪಕ್‌ ಕುತ್ತಮೊಟ್ಟೆ, ನಿವೃತ್ತ ದೈ.ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ಮಾಣಿಬೆಟ್ಟು, ವಾಲಿಬಾಲ್ ರಾಷ್ಟ್ರೀಯ ತರಬೇತುದಾರ ಮನೋಜ್ ಅಡ್ಕಾರು, ಶರತ್ ಅಡ್ಕಾರು, ಹರೀಶ್ ಉಬರಡ್ಕ, ರಝಾಕ್ ಸುಳ್ಯ, ಸುದರ್ಶನ್ ನಾವೂರು, ಮುರಳಿ ನಳಿಯಾರು, ಪ್ರವೀಣ್ ಜಯನಗರ, ಮಂಜುನಾಥ್ ಐವರ್ನಾಡು, ನಿತಿನ್ ಸುಳ್ಯ, ವಿಜಯಕುಮಾರ್ ಆಲೆಟ್ಟಿ,ಮನಮೋಹನ್ ಪುತ್ತಿಲ ಮೊದಲಾದವರಿದ್ದರು.

ದೊಡ್ಡಣ್ಣ ಬರೆಮೇಲು ಸ್ವಾಗತಿಸಿ, ಭವಾನಿಶಂಕರ ಕಲ್ಮಡ್ಕ ವಂದಿಸಿದರು. ಎಂ.ಜೆ. ಶಶಿಧರ್ ಕಾರ್ಯಕ್ರಮ ನಿರೂಪಿಸಿದರು.

ಮೇ.11ರಂದು ಸಮಾರೋಪ : ಮೇ.4ರಂದು ಶಿಬಿರ ಆರಂಭಗೊಂಡಿದ್ದು, ಮೇ.5ರಂದು ಉದ್ಘಾಟನೆ ನಡೆಯಿತು. ಮೇ.11ರಂದು ಸಮಾರೋಪ ನಡೆಯಲಿದೆ. ಅಂದು ವಾಲಿಬಾಲ್ ಹಿರಿಯ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ, ಸಂಜೆ 4 ಗಂಟೆಯಿಂದ ವಾಲಿಬಾಲ್ ಪಂದ್ಯಾಟ ನಡೆಯಲಿದೆ.