ಬರೆಗೆ ಗುದ್ದಿ ನಿಂತ ಬಸ್ – ಪ್ರಯಾಣಿಕರು ಪಾರು














ಬೆಂಗಳೂರಿನಿಂದ ಸುಳ್ಯ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಖಾಸಗಿ ಬಸ್ ಒಂದರ ಚಾಲಕನಿಗೆ ಹೃದಯಾಘಾತವಾಗಿ ಬಸ್ ನಿಯಂತ್ರಣ ತಪ್ಪಿ ಬರೆಗೆ ಗುದ್ದಿ ನಿಂತ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಮುಂಜಾನೆ ಮಡಿಕೇರಿ ಬಳಿಯ ಕಾಟಿಕೇರಿಯಲ್ಲಿ ನಡೆದಿದೆ.
ನಿನ್ನೆ ರಾತ್ರಿ ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಪೂರ್ಣಿಮ ಬಸ್ ನಿನ್ನೆ ರಾತ್ರಿ ಬೆಂಗಳೂರಿನಿಂದ ಹೊರಟಿತು. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಮಡಿಕೇರಿ ದಾಟಿ ಬರುತ್ತಿರುವಾಗ ಕಾಟಿಕೇರಿ ಬಳಿ ತಿರುವಿನಲ್ಲಿ ಬಸ್ ಚಾಲಕ ಶಿವಕುಮಾರ್ ಹೃದಯಾಘಾತಕ್ಕೊಳಗಾಗಿದ್ದಾರೆನ್ನಲಾಗಿ ಆಗ ಬಸ್ ನಿಯಂತ್ರಣ ತಪ್ಪಿ ಬದಿಗೆ ಸರಿದು ಬರೆಗೆ ಒರಗಿ ನಿಂತಿತು. ಬಸ್ ಚಾಲಕ ಕುಳಿತಲ್ಲೇ ಸಾವನ್ನಪ್ಪಿದ್ದಾರೆನ್ನಲಾಗಿದೆ. ಆ ಸಂದರ್ಭ ಚಾಲಕ ಶಿವಕುಮಾರ್ ಬಸ್ ನಿಲ್ಲಿಸಲು ಯತ್ನಿಸಿ ಸಾಧ್ಯವಾಗದಿದ್ದಾಗ ಬದಿಗೆ ಕೊಂಡೊಯ್ದು ಬರೆಗೆ ಗುದ್ದಿಸಿ ನಿಲ್ಲಿಸಿದರೆಂದು ಹೇಳಲಾಗುತ್ತಿದೆ. ಬಸ್ಸಲ್ಲಿ 24 ಮಂದಿ ಪ್ರಯಾಣಿಕರು ಇದ್ದು ಅವರ ಪ್ರಾಣ ಉಳಿಸಲು ಯಶಸ್ವಿಯಾದ ಚಾಲಕ ಬಳಿಕ ಹೃದಯಾಘಾತ ತೀವ್ರತೆಯಿಂದ ಕೊನೆಯುಸಿರೆಳೆದರು.
ಬಳಿಕ ಪೊಲೀಸರು ಬಂದು ಆಂಬುಲೆನ್ಸ್ನಲ್ಲಿ ಚಾಲಕನನ್ನು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ದರು.







