
















ಮರ್ಕಂಜದ ಪನಿವಾರ ನಾಗ ಸಾನಿಧ್ಯ ಮತ್ತು ಗುಳಿಗ ಸಾನಿಧ್ಯದಲ್ಲಿ ಪನಿವಾರ ಗುಳಿಗ ದೈವದ ನೇಮವು ನಿನ್ನೆ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಪೂ.9 ಗಂಟೆಗೆ ಗಣಹೋಮ, ನಂತರ ನಾಗತಂಬಿಲ, ಗುಳಿಗ ತಂಬಿಲ ಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಬಲ್ನಾಡು ಪೇಟೆ ಬಸದಿಯಿಂದ ಭಂಡಾರ ಬಂದು, ಅನ್ನಸಂತರ್ಪಣೆ ನಡೆದು, ನಂತರ ದೈವದ ನೇಮೋತ್ಸವ ನಡೆಯಿತು.
ನೇಮೋತ್ಸವಕ್ಕೆ ಊರ ಪರವೂರ ನೂರಾರು ಭಕ್ತರು ಪಾಲ್ಗೊಂಡು ಶ್ರೀ ದೈವದ ಪ್ರಸಾದ ಸ್ವೀಕರಿದರು. ಇಂದು ಮಧ್ಯಾಹ್ನ ಸಾನಿಧ್ಯದಲ್ಲಿ ಗುಳಿಗ ದೈವದ ಅಗೇಲು ಸೇವೆ ನಡೆಯಲಿದೆ.







