ವಿದ್ಯುತ್ ಕಂಬವೇ ಮುರಿದು ಬಿದ್ದು ಅದೃಷ್ಟವಷಾತ್ ಅಪಾಯದಿಂದ ಪಾರು















ಪೆರಾಜೆ ಬಳಿಯ ಪಾಲಡ್ಕ ಎಂಬಲ್ಲಿ ವಿದ್ಯುತ್ ಲೈನ್ ಗೆ ಬಿದ್ದ ತೆಂಗಿನ ಗರಿಯನ್ನು ಲೈನ್ ಮ್ಯಾನ್ ಒಬ್ಬರು ಎಳೆಯಲು ಹೋದಾಗ ವಿದ್ಯುತ್ ಕಂಬವೇ ಮುರಿದು ಬಿದ್ದ ಹಾಗೂ ಲೈನ್ ಮೇನ್ ಅದೃಷ್ಟವಶಾತ್ ಜೀವಾಪಾಯದಿಂದ ಪಾರಾದ ಘಟನೆ ಮೇ 8ರಂದು ರಾತ್ರಿ ಸಂಭವಿಸಿದೆ.
ಸಂಜೆ ವೇಳೆ ಸುರಿದ ಭಾರಿ ಗಾಳಿ ಮಳೆಗೆ ಪಾಲಡ್ಕದಲ್ಲಿ ತೆಂಗಿನ ಗರಿಯೊಂದು ಹೆದ್ದಾರಿ ಬಳಿಯಲ್ಲಿ ಹಾದುಹೋದ ವಿದ್ಯುತ್ ತಂತಿಯ ಮೇಲೆ ಬಿದ್ದು ಸಿಲುಕಿಕೊಂಡಿತು.
ಈ ಸಂದರ್ಭ ರಾತ್ರಿ ವೇಳೆ ಲೈನ್ ಕ್ಲಿಯರ್ ಮಾಡಲು ಹೋಗಿದ್ದ ಲೈನ್ ಮ್ಯಾನ್ ತಂತಿಯ ಮೇಲೆ ತೆಂಗಿನ ಗರಿ ನೇತಾಡುವುದನ್ನು ನೋಡಿ ಅದನ್ನು ಎಳೆದು ಕೆಳಗೆ ಹಾಕಲು ಪ್ರಯತ್ನಿಸಿದಾಗ ಪಕ್ಕದಲ್ಲಿದ್ದ ವಿದ್ಯುತ್ ಕಂಬವೇ ಮುರಿದು ಹೆದ್ದಾರಿಗೆ ಬಿದ್ದಿತು. ಘಟನೆಯಿಂದ ಅದೃಷ್ಟವಶಾತ್ ಲೈನ್ ಮ್ಯಾನ್ ಅಪಾಯದಿಂದ ಪಾರಾದರು. ಮುರಿದು ಬಿದ್ದ ಕಂಬದ ತಂತಿಗಳು ರಸ್ತೆಗೆ ಬಿದ್ದಿದ್ದ ಕಾರಣ ಅದನ್ನು ತೆರೆವುಗೊಳಿಸುವಲ್ಲಿ ಅರ್ಧ ಗಂಟೆ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು ಎಂದು ತಿಳಿದುಬಂದಿದೆ.







