













ಆಲೆಟ್ಟಿ ಗ್ರಾಮದ ದಿl ಪೂವಯ್ಯ ನಾಯ್ಕ ಕುಡೆಂಬಿ ಅವರ ಪತ್ನಿ ಕಮಲ ಅವರು ಮೇ. 8 ರಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಸೋಮನಾಥ ನಾಯ್ಕ ಕುಡೆಂಬಿ, ಜನಾರ್ದನ ನಾಯ್ಕ ಕುಡೆಂಬಿ, ಪುತ್ರಿಯರಾದ ಶ್ರೀಮತಿ ಲಲಿತಾ ಬಾಲಕೃಷ್ಣ ಕುಡೆಂಬಿ, ಶ್ರೀಮತಿ ಸುಮಿತ್ರ ಲಿಂಗಪ್ಪ ನಾಯ್ಕ ಪಾನತ್ತೂರು, ಶ್ರೀಮತಿ ನೀಲಾವತಿ ನಾರಾಯಣ ಕರಿಕೆ ಕುಡೆಂಬಿ, ಶ್ರೀಮತಿ ಸಾವಿತ್ರಿ ಹರೀಶ್ ಮಾಡಾವು , ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.







