
- ಸುಳ್ಯ ಗಾಂಧಿನಗರದಲ್ಲಿ ಕಾರ್ಯಾಚರಿಸುತ್ತಿರುವ ಶೈಕ್ಷಣಿಕ ತರಭೇತಿ ಸಂಸ್ಥೆಯಾದ ಎನ್ ಲೈಟ್ ಅಕಾಡೆಮಿ ವತಿಯಿಂದ ಅಕಾಡೆಮಿಯಲ್ಲಿ ತರಬೇತಿ ಪಡೆದ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗಳಿಸಿದ ವಿದ್ಯಾರ್ಥಿಗಳಿಗೆ, ಪೋಷಕರಿಗೆ,ಶಿಕ್ಷಕರಿಗೆ ಅಭಿನಂದನಾ ಮತ್ತು ಗೌರವರ್ಪಣೆ ಕಾರ್ಯಕ್ರಮ ಮೆ.4 ರಂದು ನಡೆಯಿತು.














ಕಳೆದ 5 ವರ್ಷಗಳಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿ ಅವರ ಶೈಕ್ಷಣಿಕ ಜೀವನದಲ್ಲಿನ ಪ್ರಮುಖ ಘಟ್ಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಸಂಸ್ಥೆಯು ಕಳೆದ ಶೌಕ್ಷಣಿಕ ಸಾಲಿನಲ್ಲಿ ಸಮುದಾಯಕ್ಕೆ ಹಾಗೂ ಮಕ್ಕಳಿಗೆ ಅಹರ್ನಿಶಿ ಸೇವೆಯನ್ನು ಸಲ್ಲಿಸಿದೆ.
ಪ್ರತೀ ವರ್ಷದಂತೆ ಈ ಬಾರಿಯೂ ಸಂಸ್ಥೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಡಿಸ್ಟಿಂಕ್ಷನ್ ಹಾಗೂ ಪ್ರಥಮ ದರ್ಜೆಯೊಂದಿಗೆ ತೇರ್ಗಡೆ ಹೊಂದಿದ್ದು, ವಿದ್ಯಾರ್ಥಿಗಳಾದ ಆಸಿಯ ಸನಾ, ನಸೀರ ಜನ್ನತ್ , ಫಾತಿಮಾ ಮರಿಯಮ್ ರಿಶ್ಮಾ, ಫಾತಿಮಾ ಮುಫೀದ , ಇಮ್ನ ಫಾತಿಮಾ , ಲಿಝಾ ಮರಿಯಮ್ , ಶಿಝಾ ಮರಿಯಮ್, ಕಲಂದರ್ ಇಬ್ರಾಹಿಂ ಹಿಬಾನ್,ಅಬ್ದುಲ್ಲಾ ಮುಜಮ್ಮಿಲ್,ಫಾತಿಮತ್ ಶಮ್ನ ಪಿ ಎಚ್,ಮುಹಮ್ಮದ್ ಅರ್ಹಾನ್, ಮುಹಮ್ಮದ್ ಮಶೂಫ್, ಶಾರಿಕ ಫಾತಿಮಾ,ಅಬೂಬಕ್ಕರ್ ಶಾಹೀನ್,ರಿಝಾ ಅಹ್ಮದ್ ಸೇರಿ ಒಟ್ಟು 15 ಮಂದಿ ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಉಳಿದ 23 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಈ ವಿದ್ಯಾರ್ಥಿಗಳನ್ನು ಅಕಾಡೆಮಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ವರ್ತಕರ ಸಂಘದ ಉಪಾಧ್ಯಕ್ಷ ಅದಂ ಕುಂಙಿ ಹಾಜಿ ಕಮ್ಮಾಡಿ,ಸುಳ್ಯ ಅರೋಗ್ಯ ರಕ್ಷಾ ಸಮಿತಿ ಸದಸ್ಯ ಶಾಹಿದ್ ಪಾರೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಸಹಕರಿಸಿದ ಸಂಸ್ಥೆಯ ಬೋಧಕರಾದ ಝಕಾರಿಯಾ ಆಶಿಕ್, ಮುಹಮ್ಮದ್ ನಿಝಾರ್, ಅಬ್ದುಲ್ ರವೂಫ್ ಹಾಗೂ ಹಮೀದಾ ಕೌಸರ್ ರವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಿದರು.







