













ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ 7 ನೇ ರ್ಯಾಂಕ್ ಪಡೆದ ಅಶ್ವಿತಾ ಎಂ.ಡಿ ಯವರಿಗೆ ಜಾಲ್ಸೂರು ಶ್ರೀ ಗುರುರಾಘವೇಂದ್ರ ಭಜನಾ ಮಂದಿರದ ವತಿಯಿಂದ ಸನ್ಮಾನ ಕಾರ್ಯಕ್ರಮ ಮೇ. 7 ರಂದು ನಡೆಯಿತು.
ಅಡ್ಕಾರಿನ ಶ್ರೀ ಪ್ರಸನ್ನ ಆಂಜನೇಯ ಮತ್ತು ಗುಳಿಗರಾಜ ಕ್ಷೇತ್ರದ ಅಧ್ಯಕ್ಷ ಶಿವರಾಮ ರೈ ಜಾಲ್ಸೂರು ಅಶ್ವಿತಾರವರನ್ನು ಶಾಲು, ಫಲಪುಷ್ಪ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ಮಾಧವ ಗೌಡ ಕಾಳಮನೆ, ಅಶ್ವಿತಾರವರ ತಂದೆ ದಾಮೋದರ, ತಾಯಿ ಶೀಲಾವತಿ ಸೇರಿದಂತೆ ಭಜನಾ ಮಂದಿರದ ಪದಾಧಿಕಾರಿಗಳು, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.







