ಕಾನಡ್ಕ ಕುಟುಂಬದ ಧರ್ಮದೈವದ 3ನೇ ವರ್ಷದ ಪ್ರತಿಷ್ಟಾ ವಾರ್ಷಿಕೋತ್ಸವು ಮೇ.03 ರಂದು ನಡೆಯಿತು. ಪ್ರತಿಷ್ಟಾ ವಾರ್ಷಿಕೋತ್ಸವದ ನಂತರ ತರವಾಡು ಮನೆಯಲ್ಲಿ ಮುಡಿಪು ಪೂಜೆ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಿತು.
ಮುಖ್ಯ ಭಾಷಣಗಾರರಾಗಿ ನಿವೃತ್ತ ಪ್ರಾಂಶುಪಾಲ ಸೀತಾರಾಮ ಕೇವಳ ಭಾಗವಹಿಸಿ ಕುಟುಂಬದ ಬಂಧ ಅನುಬಂಧಗಳ ಬಗ್ಗೆ ವಿಶೇಷ ಉಪನ್ಯಾಸವಿತ್ತರು.














ಸಭೆಯಲ್ಲಿ ಕುಟುಂಬದ ಹಿರಿಯರು ಹಾಗೂ ಎಸ್.ಎಸ್.ಎಲ್.ಸಿ, ಪಿ.ಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಹಿರಿಯರ ಕಿರು ಪರಿಚಯವನ್ನು ಹೈಕೋರ್ಟ್ ವಕೀಲ ದೇವಿಪ್ರಸಾದ್ ಕಾನಡ್ಕ ಇವರು ನೆರವೇರಿಸಿದರು.
ನಿವೃತ್ತ ಚೀಪ್ ಪೈನಾನ್ಸ್ಷಿಯಲ್ ಕಂಟ್ರೋಲರ್ ಶಿವರಾಮ ಕಾನಡ್ಕ ಇವರು ಹಿರಿಯರಿಗೆ ಗೌರವ ಅರ್ಪಣೆ ಸಲ್ಲಿಸಿದರು.
ಗೌರವಿಸಲ್ಪಟ್ಟ ಹಿರಿಯರಿಗೆ ಬಜಾಜ್ ಬಲ್ಟ್ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿ ಇರುವ ಕುಟುಂಬ ಸದಸ್ಯ ಸುಭಾಷ್ ಕಾಯರ ಕಾನಡ್ಕರವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಇಟ್ಟಿಗುಂಡಿ, ಕಾರ್ಯದರ್ಶಿ ನೇಮಿಚಂದ್ರ ಕಾನಡ್ಕ, ಶಿವರಾಮ ಕಾನಡ್ಕ, ಯಶವಂತ ಕಾನಡ್ಕ, ಸೀತಾರಾಮ್ ಕಾನಡ್ಕ ಉಪಸ್ಥಿತರಿದ್ದರು
ಕುಟುಂಬದ ಸದಸ್ಯೆ ಶ್ರೀಮತಿ ಉಮಾ ರಾಧಾಕೃಷ್ಣರವರು ಪ್ರಾರ್ಥಿಸಿದರು. ವೆಂಕಟ್ರಮಣ ಇಟ್ಟಿಗುಂಡಿರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪರಮೇಶ್ವರ ಬಿಳಿಮಲೆ ಸ್ವಾಗತಿಸಿ, ಶ್ರೀಮತಿ ಸೌಮ್ಯ ಅನೂಪ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಶೋಭಾ ಯತೀಶ್ ಕಾನಡ್ಕ ವಂದಿಸಿದರು.







