ಆಲೆಟ್ಟಿ: ಮನೋಹರ ಗೌಡ ಕಲ್ಲೆಂಬಿ ನಿಧನ

0

ಆಲೆಟ್ಟಿ ಗ್ರಾಮದ ನಿವಾಸಿ ಕಲ್ಲೆಂಬಿ ಮನೆ ತನದ ಮನೋಹರ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ.9ರಂದು
ನಿಧನರಾದರು. ಅವರಿಗೆ 53 ವರ್ಷ ವಯಸ್ಸಾಗಿತ್ತು. ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಮೂರು ದಿನಗಳ ಹಿಂದೆ ಮಂಗಳೂರಿನ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಮೃತರು ಪತ್ನಿ ಶ್ರೀಮತಿ ರೇಣುಕಾ, ಪುತ್ರಿಯರಾದ ಕು.ಅನುಜ್ಞಾ , ಕು.ಅಭೀಜ್ಞಾ ಹಾಗೂ ಸಹೋದರ , ಸಹೋದರಿಯರನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.