ಹಿರಿಯ ಉದ್ಯಮಿ ಚಿದಾನಂದ ಭಟ್ ಕುಂಭಕ್ಕೋಡುರವರ ಸಹಸ್ರ ಚಂದ್ರದರ್ಶನ ಹವನ

0

ಹಿರಿಯ ಉದ್ಯಮಿ ಹಾಗೂ ಸುಳ್ಯದ ಸಂತೋಷ್ ಚಿತ್ರಮಂದಿರದ ನಿರ್ಮಾತೃರಾದ ಅಚ್ಚುತ ಭಟ್ ಕುಂಭಕ್ಕೋಡುರವರ ಮಗ ಚಿದಾನಂದ ರವರು ೮೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಹಸ್ರ ಚಂದ್ರ ದರ್ಶನ ಹವನ ಕಾರ್ಯಕ್ರಮ ಮೇ ೧೪ ರಂದು ಕುಂಭಕ್ಕೋಡು ನಿವಾಸದಲ್ಲಿ ನಡೆಯಿತು.

ಬ್ರಾಹ್ಮಣರ ಆಶೀರ್ವಾದ ಪಡೆದು ದಶದಾನ ಮಾಡಿಕೊಂಡು ಪೂಜಾ ಕಾರ್ಯಕ್ರಮಗಳು ನಡೆಯಿತು. ಅತಿಥಿಗಳನ್ನು ಆಹ್ವಾನಿಸಿ ಊಟ ಉಪಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಗೀತಾ ಕುಂಭಕ್ಕೋಡು, ಪುತ್ರ ಸಂತೋಷ್ ಹಾಗೂ ಸೊಸೆ ಶ್ರೀಮತಿ ಶಾಂಭವಿ ಸಂತೋಷ್, ಮೊಮ್ಮಗಳು ಬೇಬಿ ಶ್ರೀಯಾ ಹಾಗೂ ಗುರು ಹಿರಿಯರು, ಬಂಧು ಬಳಗದವರು ಭಾಗವಹಿಸಿದ್ದರು.