ವಿದ್ಯಾ ಡಿ.ರೈ ಪೆರಾಜೆಯವರ ಶ್ರದ್ದಾಂಜಲಿ ಕಾರ್ಯಕ್ರಮ

0

ಜಿಲ್ಲೆಯ ಹಿರಿಯ ಸಹಕಾರಿ ಧುರೀಣ ಸುಳ್ಯದ ಪಿ.ಬಿ.ದಿವಾಕರ ರೈಯವರ ಧರ್ಮಪತ್ನಿ ಶ್ರೀಮತಿ ವಿದ್ಯಾ ಡಿ. ರೈ ಯವರು ಇತ್ತೀಚೆಗೆ ನಿಧನರಾಗಿದ್ದು, ಅವರ ಶ್ರದ್ದಾಂಜಲಿ ಕಾರ್ಯಕ್ರಮವು ಇಂದು ಮಂಗಳೂರಿನ ಟಿ.ವಿ. ರಮಣ್ ಪೈ ಕನ್‌ವೆನ್ಶನ್ ಸೆಂಟರ್‌ನಲ್ಲಿ ನಡೆಯಿತು.
ಪ್ರಸಾದ್ ರೈ ಮಂಗಳೂರುರವರು ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತಿ ದಿವಾಕರ ರೈ ಹಾಗೂ ಸಹೋದರರು, ಮನೆಯವರು, ಬಂಧುಗಳು ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.