ಎಣ್ಮೂರು : ಮಕ್ಕಳ ಭಜನಾ ತರಬೇತಿ ಹಾಗೂ ಸಂಸ್ಕಾರ ಶಿಬಿರದ ಸಮಾರೋಪ – ಮಾತಾ ಪಿತೃ ವಂದನಾ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ( ರಿ ) ನಿಂತಿಕಲ್ಲು ವಲಯ,
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನಿಂತಿಕಲ್ಲು ವಲಯ,
ಶ್ರೀ ಸೀತಾರಾಮಾಂಜನೇಯ ಭಾರತೀ ಮಂದಿರ ಎಣ್ಮೂರು
ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ನಿಂತಿಕಲ್ಲು ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಮೇ. 15 ರಂದು ಆರಂಭಗೊಂಡ ಮಕ್ಕಳ ಭಜನಾ ತರಬೇತಿ ಮತ್ತು ಸಂಸ್ಕಾರ ಶಿಬಿರ ಇದರ ಸಮಾರೋಪ ಸಮಾರಂಭವು ಮೇ. 22 ರಂದು ಶ್ರೀ ಸೀತಾರಾಮಾಂಜನೇಯ ಭಾರತೀ ಮಂದಿರ ಎಣ್ಮೂರುನಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನಿಂತಿಕಲ್ಲು ಇದರ ವಲಯಾಧ್ಯಕ್ಷ ಅನೂಪ್ ಕುಮಾರ್ ಆಳ್ವ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ.ಕ್ಷೇ. ಧ. ಗ್ರಾ. ಯೋ . ಬಿ.ಸಿ.ಟ್ರಸ್ಟ್(ರಿ)ದ. ಕ ಜಿಲ್ಲೆ ಇದರ ನಿರ್ದೇಶಕ ಬಾಬು ನ್ಯಾಕ ಇವರು ಮಾತನಾಡಿ ಕಾರ್ಯಕ್ರಮದ ಹಾಗೂ ಶಿಬಿರದ ವಿದ್ಯಾರ್ಥಿಗಳ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ತರಬೇತಿ ನೀಡಿದ ತರಬೇತುದಾರರಾದ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ, ವೆಂಕಟರಮಣ ಆಚಾರ್ ಕಲ್ಮಡ್ಕ, ಸುಹಾಸ್ ಅಲೆಕ್ಕಾಡಿ ಹಾಗೂ ಕು| ಸವಿತಾ ಇವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು ಅಧ್ಯಕ್ಷ
ಸೋಮಶೇಖರ ಪೈಕ, ಜನಜಾಗೃತಿ ವೇದಿಕೆ ನಿಂತಿಕಲ್ಲು ವಲಯದ ಅಧ್ಯಕ್ಷ ವಿಶ್ವನಾಥ ಕಲ್ಲೆಂಬಿ, ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನ ವ್ಯವಸ್ಥಾಪನ ಸಮಿತಿ
ಅಧ್ಯಕ್ಷ ಎನ್. ಜಿ. ಲೋಕನಾಥ ರೈ ,
ಎಣ್ಮೂರು ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಲಿಂಗಪ್ಪ ಬೆಳ್ಳಾರೆ, ದೇವರಕಾನ ಶ್ರೀ ಲಕ್ಷೀನರಸಿಂಹ ದೇವಸ್ಥಾನದ ಕಾರ್ಯದರ್ಶಿ ಅನೂಪ್ ಬಿಳಿಮಲೆ, ಶ್ರೀಮತೀ ಮಧು ಯತೀಶ್, ವಿಶ್ವನಾಥ ರೈ ಅರ್ಗುಡಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ಪ್ರಾರ್ಥನೆಗೈದರು.
ಯೋಜನಾಧಿಕಾರಿ ಮಾಧವ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯ ಮೇಲ್ವಿಚಾರಕಿ ಶ್ರೀಮತಿ ಸವಿತಾ ಶೆಟ್ಟಿ ವಂದಿಸಿದರು. ಸುಹಾಸ್ ಅಲೆಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಮಂಚಿತವಾಗಿ ತರಬೇತುದಾರರಾದ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಇವರ ಮಾರ್ಗದರ್ಶನದಲ್ಲಿ ಶಿಬಿರದ ಎಲ್ಲಾ ವಿದ್ಯಾರ್ಥಿಗಳಿಂದ ಮಾತಾಪಿತೃ ವಂದನಾ ಕಾರ್ಯಕ್ರಮವು ನಡೆಯಿತು.