ಕೃತಿಕಾ ಮದುವೆಗದ್ದೆ ಯವರಿಗೆ ಡಾಕ್ಟರೇಟ್ ಪದವಿ ಪ್ರದಾನ

0

ಆಲೆಟ್ಟಿ ಗ್ರಾಮದ ಕೃತಿಕಾ ಮದುವೆಗದ್ದೆ ಯವರು “Effectiveness of Constructionist Teaching Package in Mathematics for Enhancing Computational Thinking Skills of Primary School Students” ಎಂಬ ವಿಷಯದ ಕುರಿತು ಮಂಡಿಸಿದ ಪ್ರಬಂಧಕ್ಕೆ ಮೇ 19 ರಂದು ಡಾಕ್ಟರೇಟ್ ಪದವಿ ಲಭಿಸಿದೆ.

ಇವರು ಸೆಂಟ್ರಲ್ ಯುನಿವರ್ಸಿಟಿ ಆಫ್ ಕೇರಳ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದಲ್ಲಿ ಸೀನಿಯರ್ ರಿಸರ್ಚ್ ಫೆಲೋ ಆಗಿ ಪ್ರೋ. ಅಮೃತ್ ಜಿ.ಕುಮಾರ್ ರವರ ಮಾರ್ಗದರ್ಶನದಲ್ಲಿ ಪೂರ್ಣಕಾಲಿಕ ಸಂಶೋಧನಾ ವಿದ್ಯಾರ್ಥಿನಿಯಾಗಿ ಮೂರುವರೆ ವರ್ಷಗಳಲ್ಲಿ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿರುತ್ತಾರೆ.

ಇವರ ಸಂಶೋಧನಾ ಕಾರ್ಯವನ್ನು ಬಾಹ್ಯ ಪರೀಕ್ಷಕರು ಹಾಗೂ ಪಿ.ಎಚ್‌.ಡಿ ವಿವಾ ವೊಸ್ ಪರೀಕ್ಷೆಯ ಅಧ್ಯಕ್ಷೆಯಾದ ಪ್ರೋ. ಜಾಗ್ ಪ್ರೀಟ್ ಕೌರ್ ರವರು ಮೆಚ್ಚುಗೆ ವ್ಯಕ್ತಪಡಿಸಿ ರುತ್ತಾರೆ.

ಈ ಸಂದರ್ಭದಲ್ಲಿ ಶಿಕ್ಷಣ ವಿಭಾಗದ ಡೀನ್ ಮತ್ತು ಮುಖ್ಯಸ್ಥರು, ಹಿರಿಯ ಪ್ರಾಧ್ಯಾಪಕರು,ಐಟಿಇಪಿ ವಿಭಾಗದ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಎಂ.ಇಡಿ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

ಇವರು ಆಲೆಟ್ಟಿ ಗ್ರಾಮದ ಚಿದಾನಂದ ಮದುವೆಗದ್ದೆ ಹಾಗೂ ಶ್ರೀಮತಿ ಹರಿಣಾಕ್ಷಿ ದಂಪತಿಯ ಪುತ್ರಿ.
ಕವನ್ ಹರಿಕುಮಾರ್ ರವರ ಪತ್ನಿ. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ, ವಿವೇಕಾನಂದ ಪಿಯು ಕಾಲೇಜು ಪುತ್ತೂರು, ಪ್ರಾದೇಶಿಕ ಶಿಕ್ಷಣ ಸಂಸ್ಥೆ (NCERT) ಮೈಸೂರಿನ ಹಿರಿಯ ವಿದ್ಯಾರ್ಥಿನಿ. ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಾದ. ಪ್ರಯೋಗ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಸೆಂಟರ್ ನಲ್ಲಿ ಸೀನಿಯರ್ ಎಜುಕೇಶನ್ ರಿಸರ್ಚರ್ ಆಗಿಕಾರ್ಯನಿರ್ವಹಿಸುತ್ತಿದ್ದಾರೆ.