













ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಶನ್ ಬೆಂಗಳೂರು ಇದರ ನಿರ್ದೇಶಕರಾದ ನಾಟ್ಯ ಗುರು ಡಾ. ವಿದ್ಯಾ ಲಕ್ಷ್ಮಿ ಎಂ. ಎಸ್. ರವರ ಶಿಷ್ಯೆ ವಿಧುಷಿ ಜಯಶ್ರೀ ಮದುವೆಗದ್ದೆ ಯವರ ಭರತನಾಟ್ಯ
ನೃತ್ಯ ಸಮರ್ಪಣೆ ಕಾರ್ಯಕ್ರಮವು ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರ ಕೇರ್ಪಳ ಇಲ್ಲಿ ಮೇ. 24 ರಂದು ಸಂಜೆ 6.15 ಕ್ಕೆ ಜರುಗಲಿದೆ.
ಮುಖ್ಯ ಅತಿಥಿಗಳಾಗಿ ವಿಶ್ವಕಲಾ ಆರ್ಟ್ಸ್ ಫೌಂಡೇಶನ್ ಪುತ್ತೂರು ಇದರ ನಿರ್ದೇಶಕ ಕರ್ನಾಟಕ ಕಲಾಶ್ರೀ ನಯನ ವಿ. ರೈ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ. ಆರ್. ಗಂಗಾಧರ್ ಮತ್ತು ಬಿಂದು ಜ್ಯುವೆಲ್ಲರಿ ಸುಳ್ಯ ಇದರ ನಿರ್ದೇಶಕ ಅಭಿಲಾಷ್ ಕೆ. ವಿ. ಯವರು ಭಾಗವಹಿಸಲಿದ್ದಾರೆ.







